ಡಯಟ್ ಪ್ರಾಂಶುಪಾಲ ಪುರುಷೋತ್ತಮ್, ಹಿರಿಯ ಉಪನ್ಯಾಸಕರಾದ ರೇಣುಕಮ್ಮ, ಬಿ.ಜಿ.ನಾಗರಾಜ್ ಅವರು ರಾಜ್ಯಮಟ್ಟಕ್ಕೆ ಆಯ್ಕೆಯಾದ ಪೂರ್ಣಪ್ರಜ್ಞ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಎಸ್.ರೇವತಿ, ಅರ್ಮೈನ್ ಮುದಾಸೀರ್. ಎನ್. ಶಶಿಧರ್ ಇದ್ದಾರೆ. 
ಜಿಲ್ಲೆ

ಪೂರ್ಣಪ್ರಜ್ಞ ಶಾಲೆ ರಾಜ್ಯಮಟ್ಟಕ್ಕೆ ಆಯ್ಕೆ

ಮದ್ದೂರು : 2024-25ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಟ್ಟಣದ ಶಿವಪುರದ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗುಂಪು ವಿಭಾಗದಲ್ಲಿ ಎಸ್.ರೇವತಿ, ಅರ್ಮೈನ್ ಮುದಾಸೀರ್ ಮತ್ತು ಶಿಕ್ಷಕ ಎನ್.ಶಶಿಧರ್ ಮೊದಲನೇ ಬಹುಮಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿ ಮೇಘನಾ ಎಸ್.ಗೌಡ ತೃತೀಯ ಬಹುಮಾನ, ಶಿಕ್ಷಕರ ವಿಭಾಗದಲ್ಲಿ ಟಿ.ಎಸ್.ಸತ್ಯನಾರಾಯಣ ದ್ವಿತೀಯ ಬಹುಮಾನ ಪಡೆದಿದ್ದಾರೆ. ಬಹುಮಾನ ವಿಜೇತರನ್ನು ಬಿಇಒ ಸಿ.ಎಚ್.ಕಾಳೀರಯ್ಯ, ಶಾಲಾ ಅಧ್ಯಕ್ಷೆ ಪಿ.ಕಸ್ತೂರಿ, ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ ಅಭಿನಂದಿಸಿದ್ದಾರೆ.