ಜಿಲ್ಲೆ

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸುಸ್ಥಿರ ಕಲಾ ಕಾರ್ಯಾಗಾರ

ಉಡುಪಿ: ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಫ್ರಾಚಿ ಟ್ರಸ್ಟ್ ಅವರ ಸಹ ಯೋಗದೊಂದಿಗೆ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಡಳಿತ ಮಂಡಳಿಯವರ ಆಶ್ರಯದಲ್ಲಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಏ.16 ರಿಂದ 22ರ ವರೆಗೆ ಸುಸ್ಥಿರ ಕಾರ್ಯಾಗಾರ ನಡೆಯಿತು.

ಸುಸ್ಥಿರ (ಸಸ್ಟನೇಬಲ್)ಕಾರ್ಯಾಗಾರದಲ್ಲಿ ಪ್ರಾಚೀನ ಕಾಲದ ಕಲೆಯಾದ ಬಾಟಿಕ್, ಶಿಬೋರಿ, ಕಸೂತಿ, ಇಂಡಿಗೋ ಬಣ್ಣ ತಯಾರಿ ಮುಂತಾದ ಕಲೆಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ಸೃಜನಶೀಲತೆ, ಸಂಪ್ರದಾಯ ಜೊತೆಗೆ ಸ್ವಾವಲಂಬಿ ಬದುಕಿನಲ್ಲಿ ಸ್ವ-ಉದ್ಯೋಗಿಗಳಾಗಲು ಪ್ರೋತ್ಸಾಹ ನೀಡಲಾಯಿತು. ಕೊಲ್ಕತ್ತಾ ಮೂಲದ ಪ್ರಿಯಾದತ್ತ ಶರ್ಮ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದರು.

ಮಾರುಕಟ್ಟೆಯಲ್ಲಿ ಯಾವುದೇ ಕರಕುಶಲ ವಸ್ತುಗಳನ್ನು ಕೊಂಡುಕೊಳ್ಳುವಾಗ ಯಾಕಿಷ್ಟು ಬೆಲೆ ಎಂದು ಯೋಚಿಸುತ್ತೇವೆ. ಆದರೆ ಅದರ ರಚನಾ ಪ್ರಕ್ರಿಯೆಯನ್ನು ಗಮನಿಸಿದಾಗ ನಿಜವಾದ ಬೆಲೆಯೇನು ಎಂಬುದು ಅರಿವಾಗುತ್ತದೆ. ಈ ಕಾರ್ಯಾಗಾರದಲ್ಲಿ ಕಲಿಸಿಕೊಡುತ್ತಿರುವ ಶಿಬೋರಿ ಕಲೆಯಲ್ಲಿರುವ ಪ್ರಕ್ರಿಯೆಯನ್ನು ಉದಾಹರಣೆಯಾಗಿ ನೋಡಿದರೆ ಮೊದಲಿಗೆ ಕಾಟನ್ ಬಟ್ಟೆಯಲ್ಲಿರುವ ಸ್ಟಾರ್ಚನ್ನು ಮೊನೋಪೋಲ್ ಎಂಬ ನೈಸರ್ಗಿಕ ಸೋಪ್‌ನಿಂದ ತೆಗೆದು ಒಣಗಿಸಿ ನಂತರ ತಮಗೆ ಬೇಕಾದ ಡಿಸೈನ್‌ನ ರೀತಿಯಲ್ಲಿ ಮಡಚಿ ದೂರದಿಂದ ಗಟ್ಟಿಯಾಗಿ ಕಟ್ಟಿ ಬಣ್ಣದ ಮಿಶ್ರಣದಲ್ಲಿ ಕುದಿಸಿ ಸಂಪೂರ್ಣ ರಾತ್ರಿ ಒಣಗಿಸಿ ಕಟ್ಟಿದ ದಾರವನ್ನು ಬಿಚ್ಚಿದಾಗ ನಮಗೆ ಬೇಕಾದ ಡಿಸೈನ್ ಬಟ್ಟೆಯ ಮೇಲೆ ಬಂದಿರುತ್ತದೆ. ಹೀಗೆ ಪ್ರತಿಯೊಂದು ಕರಕುಶಲವು ಅನೇಕ ರೀತಿಯ ಪ್ರಕಿಯೆಗಳನ್ನು ಒಳಗೊಂಡಿರುತ್ತದೆ ಎನ್ನುತ್ತಾರೆ ಪ್ರಾಚೀ ಸಂಸ್ಥೆ ಟ್ರಸ್ಟಿ ಪುರುಷೋತ್ತಮ ಅಡ್ವೆ.

ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಹಳ ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಪೂರ್ಣಪ್ರಜ್ಞ ಕಾಲೇಜು ಆತ್ಮನಿರ್ಭರ ಭಾರತ ಎಂಬ ಕನಸಿಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ಪ್ರಜ್ಞಾಪೂರ್ಣರನ್ನಾಗಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಪ್ರಾಂಶುಪಾಲ ಡಾ.ರಾಘವೇಂದ್ರ ಎ, ತಿಳಿಸಿದರು. ಸುಸ್ಥಿರ ಕಾರ್ಯಾಗಾರದ ಸಂಚಾಲಕಿ, ವಾಣಿಜ್ಯ ವಿಭಾಗದ ಮಧುಲಿಕ ಭಟ್ಟ, ಹಿಂದಿ ವಿಭಾಗದ ಭೈರವಿ ಸಹಕರಿಸಿದರು.