ಜಿಲ್ಲೆ

ಪೂಜಾರಿ ಅಧ್ಯಕ್ಷ ದೇಸಾಯಿ ಉಪಾಧ್ಯಕ್ಷ

ಕಕ್ಕೇರಾ: ನಿರೀಕ್ಷೆಯಂತೆ ಕಕ್ಕೇರಾ ಪಟ್ಟಣದ ಪುರಸಭೆಯ ೧೦ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಹಿಂದುಳಿದ ವರ್ಗ(ಬಿಸಿಎ)ದ ೨೩ನೇ ವಾರ್ಡ್ನ ಸದಸ್ಯ ಸಣ್ಣಅಯ್ಯಾಳಪ್ಪ ಪೂಜಾರಿ(ಬಡಿಗೇರ) ಹಾಗೂ ಉಪಾಧ್ಯಕ್ಷರಾಗಿ ೧೩ನೇ ವಾರ್ಡ್ ಸದಸ್ಯ ಎಸ್‌ಟಿ ಸಮುದಾಯದ ದೇವಿಂದ್ರ ದೇಸಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ಬೆಳಗ್ಗೆ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಕೆ.ವಿಜಯಕುಮಾರ ಅವರು ನೂತನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಸಿದರು. ಅಧ್ಯಕ್ಷ ಸ್ಥಾನಕ್ಕೆ ಸಣ್ಣಅಯ್ಯಾಳಪ್ಪ ಪೂಜಾರಿ ೨ ಸಲ ನಾಮಪತ್ರ ಸಲ್ಲಿಸಿದ ಇವರಿಗೆ ಸದಸ್ಯರಾದ ವೆಂಕಟೇಶನಾಯಕ ಜಹಾಗೀರದಾರ ಮತ್ತು ಜಯಮ್ಮ ಸೊಲ್ಲಾಪುರ ಸೂಚಕರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ದೇವಿಂದ್ರ ದೇಸಾಯಿ ಒಬ್ಬರೆ ನಾಮಪತ್ರ ಸಲ್ಲಿಸಿದ ಇವರಿಗೆ ಸದಸ್ಯರಾದ ನಿಂಗಪ್ಪ ನಾಯ್ಕ್ ಹಾಗೂ ದುರಗಮ್ಮ ಬೂದಗುಂಪಿ ಸೂಚಕರಾಗಿದ್ದರು. ೨ ನಾಮಪತ್ರ ಸಲ್ಲಿಸಿದ್ದ ಸಣ್ಣಅಯ್ಯಾಳಪ್ಪ ಒಂದು ನಾಮಪತ್ರ ತಿರಸ್ಕಾರಗೊಂಡಿದ್ದು, ಇನ್ನೊಂದು ನಾಮಪತ್ರ ಸರಿಯಾಗಿದ್ದು ಅದೇ ರೀತಿ ದೇವಿಂದ್ರ ನಾಮಪತ್ರ ಅಂಗೀಕರಿಸಲಾಯಿತು. ಇದರಿಂದ ಅಧ್ಯಕ್ಷ ಸ್ಥಾನಕ್ಕೆ ಸಣ್ಣಅಯ್ಯಾಳಪ್ಪ ಪೂಜಾರಿ(ಬಡಿಗೇರ), ಉಪಾಧ್ಯಕ್ಷ ಸ್ಥಾನಕ್ಕೆ ದೇವಿಂದ್ರ ದೇಸಾಯಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ವಿಜಯಕುಮಾರ ಘೋಷಣೆ ಮಾಡಿ ಪ್ರಮಾಣಪತ್ರ ನೀಡಿದರು.

ಶಾಸಕ ರಾಜಾ ವೇಣು ಗೋಪಾಲನಾಯಕ ಅವರು ಚುನಾವಣೆಯಲ್ಲಿ ಭಾಗಿಯಾಗಿ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಬೆಂಬಲ ನೀಡಿ ಶುಭ ಕೋರಿದರು. ೨೩ ಸದಸ್ಯ ಬಲದ ಪುರಸಭೆಯಲ್ಲಿ ೧೭ಜನ ಕಾಂಗ್ರೆಸ್ ಪಕ್ಷದ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.
ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ಬೋಗಾರ್, ಉಪ ತಹಸೀಲ್ದಾರ್ ರೇವಪ್ಪ ತೆಗ್ಗಿನಮನಿ, ಕಂದಾಯ ನಿರೀಕ್ಷಕ ಮಲಕಾಜಪ್ಪ, ಗ್ರಾಮ ಆಡಳಿತಾಧಿಕಾರಿ ಬಸವರಾಜ ಶೆಟ್ಟಿ ಸೇರಿ ಕಂದಾಯ ಮತ್ತು ಪುರಸಭೆ ಸಿಬ್ಬಂದಿ ಇದ್ದರು.

ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಪಿಐ ಸಚಿನ್ ಚಲುವಾದಿ, ಪಿಎಸ್‌ಐಗಳಾದ ಅಯ್ಯಪ್ಪ, ಚಂದ್ರಶೇಖರ, ರಾಜಶೇಖರ ನೇತೃತ್ವದಲ್ಲಿ ೩ಜನ ಎಎಸ್‌ಐ, ೧೦ ಮುಖ್ಯಪೇದೆ, ೭ಮಹಿಳಾ ಪೊಲೀಸರು ಮತ್ತು ಒಂದು ಡಿಆರ್ ವಾಹನ ನಿಯೋಜಿಸಲಾಗಿತ್ತು. ಧ್ಯಕ್ಷ-ಉಪಾಧ್ಯಕ್ಷರ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕರ‍್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಾAಗ್ರೆಸ್ ಪಕ್ಷದ ಮುಖಂಡರಾದ ರಾಜಾ ಸಂತೋಷನಾಯಕ, ರಾಜಾ ವಿಜಯಕುಮಾರ ನಾಯಕ, ರಾಜಾ ಕುಮಾರನಾಯಕ, ಹನುಮಂತರಾಯ ಜಹಾಗೀರದಾರ, ಮಲ್ಲಣ್ಣ ಮುಧೋಳ್, ನಿಂಗರಾಜ ಬಾಚಿಮಟ್ಟಿ, ರಾಜಶೇಖರಗೌಡ ಪಾಟೀಲ್ ವಜ್ಜಲ್, ಗುಂಡಪ್ಪ ಸೊಲ್ಲಾಪುರ, ವೆಂಕೋಬ ಸಾಹುಕಾರ, ನಿಂಗಯ್ಯಗೌಡ ಬೂದಗುಂಪಿ, ಪರಮಣ್ಣ ಕುಂಬಾರ, ರಮೇಶ ದೊರೆ ಇತರರಿದ್ದರು.