ಹುಡೇಂ ಗ್ರಾಪಂ ಗ್ರಂಥಾಲಯದಲ್ಲಿ ಶನಿವಾರ ಗ್ರಂಥಪಾಲಕರ ದಿನಾಚರಣೆ ನಿಮಿತ್ತ ಗ್ರಂಥಾಲಯದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗ್ರಾಪಂ ಅಧ್ಯಕ್ಷ ರಾಮಚಂದ್ರಪ್ಪ, ಕಾರ್ಯದರ್ಶಿ ತಿಪ್ಪೇರುದ್ರಪ್ಪ, ದುರುಗಪ್ಪ, ಸುನೀತಾ ಗುರುರಾಜ್ ಇದ್ದರು. 
ಜಿಲ್ಲೆ

ಪುಸ್ಯಕ ಓದುವ ಹವ್ಯಾಸ ರೂಢಿಸಿಕೊಳ್ಳಿ: ಗ್ರಾಪಂ ಅಧ್ಯಕ್ಷ ಬಿ.ರಾಮಚಂದ್ರಪ್ಪ ಅನಿಸಿಕೆ

ಕಾನಹೊಸಹಳ್ಳಿ: ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿರುವ ಪುಸ್ತಕ ಓದುವ ಮೂಲಕ ಉನ್ನತ ಹುದ್ದೆ ಪಡೆಯಲು ಮುಂದಾಗಬೇಕು ಎಂದು ಹುಡೇಂ ಗ್ರಾಪಂ ಅಧ್ಯಕ್ಷ ಬಿ.ರಾಮಚಂದ್ರಪ್ಪ ಹೇಳಿದರು.


ಸಮೀಪದ ಹುಡೇಂ ಗ್ರಾಪಂ ಗ್ರಂಥಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಂಥಾಲಯದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.


ಸರ್ಕಾರ ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಕ ಒದಗಿಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪುಸ್ತಕ, ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಗ್ರಾಮದಲ್ಲಿ ಹೊಸದಾಗಿ ಗ್ರಂಥಾಲಯ ಕಟ್ಟಡ ನಿರ್ಮಾಣವಾಗುತ್ತಿದ್ದು, ಗ್ರಾಪಂಯಿಂದ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.


ಗ್ರಂಥಾಲಯ ಮೇಲ್ವಿಚಾರಕ ಗುರುರಾಜ್‌ಮಾತನಾಡಿ, ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಹುಟ್ಟು ಹಬ್ಬದಂದು ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಮ್ಯಾಗಜಿನ್, ಕಥೆ, ಕಾದಂಬರಿಯಂತಹ ಸಾವಿರಾರು ಪುಸ್ತಕಗಳಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.


ಗ್ರಾಪಂ ಕಾರ್ಯದರ್ಶಿ ಎಂ.ಟಿ.ತಿಪ್ಪೇರುದ್ರಪ್ಪ, ಮುಖ್ಯಶಿಕ್ಷಕಿ ಸುನಿತಾ ಗುರುರಾಜ್ ಮಾತನಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತಾಯಕನಹಳ್ಳಿ ದುರುಗಪ್ಪ, ಗ್ರಾಪಂ ಬಿಲ್ ಕಲೆಕ್ಟರ್ ಕರ್ನಾರಹಟ್ಟಿ ಮಂಜಣ್ಣ, ಶಿಕ್ಷಕರಾದ ಮಚ್ಚೇಂದ್ರಪ್ಪ, ಸರೋಜಾ, ನರೇಗಾ ಕಾಯಕಮಿತ್ರ ಗಂಗಮ್ಮ, ಮುಖಂಡರಾದ ಬಿ.ಎಸ್.ಪಾಪಣ್ಣ, ಮಲ್ಲಿಕಾರ್ಜುನಪ್ಪ, ಎಂ.ಎಸ್.ನಾಗರಾಜ, ಮಂಜುನಾಥ ಇದ್ದರು.