ಗುಡ್ಲಾನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೆ ಟಾಟಾ ಟ್ರಸ್ಟ್ ವತಿಯಿಂದ ಪುಸ್ತಕ ಜೋಳಿಗೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಪ್ರಮುಖರಾದ ರವಿಕುಮಾರ, ಚಳ್ಳಪ್ಪ, ಚನ್ನಪ್ಪ, ಪ್ರಕಾಶಪ್ಪ, ಸಿದ್ದಪ್ಪ, ಮಲ್ಲಣ್ಣ ಇತರರಿದ್ದರು. 
ಜಿಲ್ಲೆ

ಪುಸ್ತಕಗಳು ಜ್ಞಾನದ ಕಣಜ - ಎಸ್ಡಿಎಂಸಿ ಅಧ್ಯಕ್ಷ ರವಿಕುಮಾರ ಹೇಳಿಕೆ

ಅಳವಂಡಿ: ವಿದ್ಯಾರ್ಥಿಗಳು ಪುಸ್ತಕ ಓದುವುದನ್ನು ಹವ್ಯಾಸವಾಗಿಸಿಕೊಳ್ಳಬೇಕು. 25 ವರ್ಷಗಳ ಕಾಲ ಪುಸ್ತಕವನ್ನು ಓದಿದರೆ 75 ವರ್ಷಗಳ ಕಾಲ ಜೀವನಕ್ಕೆ ದಾರಿ ಸಿಗಲಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ರವಿಕುಮಾರ ತಿಳಿಸಿದರು.

ಸಮೀಪದ ಗುಡ್ಲಾನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲಿಕೆ ಟಾಟಾ ಟ್ರಸ್ಟ್‌ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪುಸ್ತಕ ಜೋಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪುಸ್ತಕಗಳು ಜ್ಞಾನದ ಕಣಜ. ಅವುಗಳನ್ನು ಓದಿದಾಗ ಜ್ಞಾನದ ಅರಿವು ವಿಸ್ತಾರವಾಗುತ್ತದೆ. ಮನೆಯಲ್ಲಿ ಪುಸ್ತಕಗಳನ್ನು ಎಸೆಯಬಾರದು. ಮಕ್ಕಳಿಗೆ ಓದಲು ಅಥವಾ ಗ್ರಂಥಾಲಯಕ್ಕೆ ನೀಡಿ. ಇದರಿಂದ ಪುಸ್ತಕಗಳು ಇನ್ನೊಬ್ಬರ ಓದಿಗೆ ಸಹಕಾರಿಯಾಗಲಿವೆ ಎಂದರು.

ನಂತರ ಜಾಥಾದ ಮೂಲಕ ಗ್ರಾಮದ ಮನೆ ಮನೆಗೂ ಭೇಟಿ ನೀಡಿ ಪುಸ್ತಕಗಳನ್ನು ಸಂಗ್ರಹಿಸಲಾಯಿತು. ಮುಖ್ಯ ಶಿಕ್ಷಕ ಚಳ್ಳಪ್ಪ, ಶಿಕ್ಷಕರಾದ ಶಿವಪುತ್ರಪ್ಪ, ದೇವಪ್ಪ, ಪವಿತ್ರ, ಜನ್ನತ್ ಬೀ, ಸೀಮಾ ಹಳ್ಳಿ, ಗಾಯತ್ರಿ ಪ್ರಮುಖರಾದ ಚನ್ನಪ್ಪ, ಪ್ರಕಾಶಪ್ಪ, ಸಿದ್ದಪ್ಪ, ಮಲ್ಲಣ್ಣ ಇತರರಿದ್ದರು.