ಚಿಕ್ಕೋಡಿಯ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಪಾಲಕರ ದಿನ ಆಚರಿಸಲಾಯಿತು. ಡಾ.ಪ್ರಸಾದ ರಾಂಪುರೆ, ಡಾ.ಸತೀಶ ಭೋಜನ್ನವರ, ಡಾ.ಶಾಂತಪ್ಪ ಗೊಳ್ಳಗಿ, ಡಾ.ಮಹಾಂತಯ್ಯ ಮಠಪತಿ ಇತರರಿದ್ದರು. 
ಜಿಲ್ಲೆ

ಪುಸ್ತಕ ಓದುವುದು ಜ್ಞಾನಮಟ್ಟ ಹೆಚ್ಚಳಕ್ಕೆ ಸಹಕಾರಿ

ಚಿಕ್ಕೋಡಿ: ಕಂಪ್ಯೂಟರ್ ಹಾಗೂ ಇಂಟರ್‌ನೆಟ್‌ನಿಂದಾಗಿ ಗ್ರಂಥಾಲಯಗಳು ಶೇ.100 ಡಿಜಿಟಲೀಕರಣವಾಗಿದ್ದು, ಮುದ್ರಿತ ಪುಸ್ತಕಗಳಿಗಿಂತ ಇ-ಸಂಪನ್ಮೂಲಗಳಿಗೆ ಪ್ರಾಮುಖ್ಯತೆ ಬಂದಿದೆ ಎಂದು ಪ್ರಾಚಾರ್ಯ ಡಾ.ಪ್ರಸಾದ ರಾಂಪುರೆ ಹೇಳಿದರು.

ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಸ್.ಆರ್. ರಂಗನಾಥನ್ 131ನೇ ಜನ್ಮದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿ, ಓದುಗರಿಗೆ ಇಂದು ಇಂಟರನೆಟ್‌ನಲ್ಲಿ 27್ಡ7ಡಿಜಿಟಲ್ ಮಾಹಿತಿ ಲಭ್ಯವಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಒಳ್ಳೆಯ ಓದುಗ ಮಾತ್ರ ಒಳ್ಳೆಯ ವಾಗ್ಮಿಯಾಗಲು ಸಾಧ್ಯ. ಗ್ರಂಥಾಲಯವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನವಂತರಿಗೆ ಮಾತ್ರ ಉಜ್ವಲ ಭವಿಷ್ಯವಿದೆ. ಒಳ್ಳೆಯ ಗ್ರಂಥಾಲಯವಿರುವಲ್ಲಿ ಜ್ಞಾನ ಹಾಗೂ ಸಂಶೋಧನೆ ಹೆಚ್ಚಲು ಸಾಧ್ಯವಿದೆ ಎಂದರು.

ಗ್ರಂಥಪಾಲಕ ಸಂಗಮ ಕರಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸತೀಶ ಭೋಜನ್ನವರ, ಡಾ. ಶಾಂತಪ್ಪ ಗೊಳ್ಳಗಿ, ಡಾ. ಮಹಾಂತಯ್ಯ ಮಠಪತಿ, ಸುನೀಲ ಹೆಬ್ಬಾಳೆ, ಸುನೀಲ ಶಿಂಧೆ, ಪ್ರದೀಪ ಹೊದ್ಲೂರ, ಮಹೇಶ ಲಟ್ಟೆ, ಮಹಾಂತೇಶ ಲದ್ದಿ, ಮಲ್ಲಿಕಾರ್ಜುನ ಬಿರಾದರ, ವಿನೋದ ಬಿರಾದರ,
ನವಿನ ಮಠದ, ಡಾ.ಸೂರಜ ಮಂಗಾವತೆ, ಡಾ.ಸಚಿನ ಮೆಕ್ಕಳಕಿ ಇತರರಿದ್ದರು.