ಜಿಲ್ಲೆ

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

ಡಂಬಳ: ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಸ್ವರ್ಧಾತ್ಮಕ ಪರೀಕ್ಷೆಯ ಪಠ್ಯ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಸ್. ಕೆಂಭಾವಿ ಹೇಳಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ (ಡಿಪಿಇಪಿ) ಶಾಲೆಯಲ್ಲಿ ಹಮ್ಮಿಕೊಂಡಿದ್ದ ಏಳನೇ ತರಗತಿ ವಿದ್ಯಾರ್ಥಿಗಳು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಮನುಷ್ಯ ದೈಹಿಕವಾಗಿ ಎಷ್ಟೇ ಬಲಿಷ್ಠನಾಗಿದ್ದರೂ, ಮಾನಸಿಕವಾಗಿ ಸಬಲತೆ ಹೊಂದಬೇಕಾದರೆ ಯೋಗ ಅವಶ್ಯ ಎಂದರು.

ಮಾಜಿ ಸೈನಿಕ ಅಲ್ಲಾಭಕ್ಷಿ ಬೆನ್ನಕೊಪ್ಪ ಮಾತನಾಡಿ, ದೇಶ ಸುಭದ್ರವಾಗಿರಲು ಗಡಿಯಲ್ಲಿರುವ ಸೈನಿಕರು ಕಾರಣ. ಅವರನ್ನು ಪ್ರೀತಿಯಿಂದ ಗೌರವಿಸುವಂಥ ಮನೋಧರ್ಮವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.

ತೋಂಟದಾರ್ಯ ಬಾಲಕರ ಪ್ರೌಢಶಾಲೆ ಮುಖ್ಯೋಪ್ಯಾಧ್ಯಾಯ ಎಸ್.ಬಿ. ಹೂಗಾರ ಮಾತನಾಡಿದರು. ಗ್ರಾಮದ ಮಾಜಿ ಸೈನಿಕರಾದ ಅಲ್ಲಾಭಕ್ಷಿ ಬೆನ್ನಕೊಪ್ಪ, ಹಾಲಿ ಸೈನಿಕ ಶಾರೂಕಖಾನ್ ಕಾಸ್ತಾರ, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಳ್ಳಪ್ಪ ಮಠದ, ದಾವಲಸಾಬ್ ಸೊರಟೂರ ಅವರನ್ನು ಸನ್ಮಾನಿಸಲಾಯಿತು.

ಎಸ್​ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಉಪ್ಪಾರ, ಉಪಾಧ್ಯಕ್ಷೆ ಹೇಮಾ ಕಟ್ಟಗಿ, ಮಳ್ಳಪ್ಪ ಈ ಮಠದ, ಕಳಸಪ್ಪ ಗೊರವರ, ಹನುಮಪ್ಪ ಚವಡಕಿ, ಮೈಲಾರಪ್ಪ ಗೊರವರ, ಶರಣವ್ವ ಕದಡಿ, ಭರಮಪ್ಪ ಒಂಟೆಲಬೋವಿ, ಫಕೀರಪ್ಪ ಆದಮ್ಮನವರ, ಪ್ರಭಾರಿ ಮುಖ್ಯೋಪಾಧ್ಯಾಯ ಎಸ್.ಡಿ. ವಡ್ಡರ, ಶಿಕ್ಷಕ

ಡಿ.ಎಚ್. ಹೊಸಮನಿ, ಎ.ಸಿ. ಕೆಳಗಿನಮನಿ, ಎಸ್.ಐ. ಪಟ್ಟೇದ, ಎಸ್.ಜಿ. ಪಾಟೀಲ ಇತರರಿದ್ದರು.