ಚಿಕ್ಕೋಡಿ ಗ್ರಾಮೀಣ: ಡಿಜಿಟಲ್ ಸಾಧನದಿಂದ ಪುಸ್ತಕ ಓದುವ ಸಂವೇದನೆ ಕಳೆದುಕೊಂಡಿದ್ದೇವೆ. ಎಲ್ಲರೂ ಪುಸ್ತಕ ಓದಿ ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳಗಾವಿ ವಿಭಾಗ ಸಹಕಾರ್ಯವಾಹಕ ಸಂಜಯ ಅಡಕೆ ಹೇಳಿದರು.
ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ವಿವೇಕ ಸೇವಾ ಪರಿವಾರ ಹಾಗೂ ಸ್ವಾಮಿ ವಿವೇಕಾನಂದ ಯುವ ಅಭಿವೃದ್ಧಿ ಆರ್ಥಿಕ ಸಂಸ್ಥೆಯ ಆಶ್ರಯದಲ್ಲಿ ಈಚೆಗೆ ಸಂಗಮ ಜೋಳಿಗೆ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು. ಯಕ್ಸಂಬಾ ಶಿವಯೋಗಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿದರು. ಜ್ಯೋತಿಬಾ ದೇವರ ಚರಿತ್ರೆ ಕನ್ನಡ ಪುಸ್ತಕ ಪ್ರಕಟಣೆ, ಧನಶ್ರೀ ಮಹಿಳಾ ಸಹಕಾರಿ ಸಂಘದ ಸ್ಥಳಾಂತರ ಕಾರ್ಯಕ್ರಮ, ರಾಷ್ಟ್ರೀಯ ರತ್ನ ಪ್ರಶಸ್ತಿ ಪುರಸ್ಕೃತ ರಾಜು ಬಾಕಳೆ ಹಾಗೂ ಶತಾಯುಷಿ ಶಂಕರ ಗಿಡ್ಡ ಅವರನ್ನು ಸನ್ಮಾನಿಸಲಾಯಿತು.
ವಿವೇಕ ಸೇವಾ ಪರಿವಾರದ ಅಧ್ಯಕ್ಷ ಮಹೇಶ ಬಾಕಳೆ, ತಾನಾಜಿ ಡವರಿ, ಭೀಮಾ ಹಿಟಣೆ, ಬಾಲಚಂದ್ರ ಬಾಕಳೆ, ರಾಮಪ್ಪ ಕೆರಗುಟ್ಟೆ, ರವೀಂದ್ರ ಖೊತ, ವಿರುಪಾಕ್ಷಿ ಗಿಡ್ಡ, ಶರದ ಶಿಂಧೆ, ಆದರ್ಶ ಶಿಂಧೆ, ರಾಮಚಂದ್ರ ಬಾಕಳೆ, ಮಚಂದ್ರ ಹಿಟಣೆ, ಭರತ ಕೇಸ್ತೆ, ತಾನಾಜಿ ಚಕ್ರೆ, ಸುರೇಶ ಜಾಧವ, ಜಗದೀಶ ಹೆಗಲೆ, ಕೃಷ್ಣಾ ದೇವನಗೋಳ, ಸುರೇಶ ತಂಗಡೆ, ಪಂಚಾಕ್ಷರಿ ಮಠಪತಿ, ಸಂತೋಷ ಅಲಗೂರೆ, ಡಾ. ಅಜಿತ ಇಂಗಳೆ, ಕೇದಾರಿ ನಾಯಿಕ, ಅಭಿಷೇಕ ಹಿಟಣೆ ಇತರರಿದ್ದರು.