ಜಿಲ್ಲೆ

ಪುಷ್ಪಾಲಂಕಾರದಲ್ಲಿ ಕಂಗೊಳಿಸಿದ ಬರಗೇರಮ್ಮ

ಚಿತ್ರದುರ್ಗ: ನಗರದೇವತೆ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿ ದೇಗುಲದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಶುಕ್ರವಾರ ಅಭಿಷೇಕ, ದೇವಿ ಸಹಸ್ರನಾಮ ಪಠಣದೊಂದಿಗೆ ವಿಶೇಷ ಪೂಜೆ ನೆರವೇರಿತು.

ದೇವಿಯ ಮೂರ್ತಿಗೆ ಕೆಂಪು, ಹಳದಿ ಬಟನ್ಸ್, ನೀಲಿ, ಬಿಳಿ ವರ್ಣದ ಸೇವಂತಿ, ಗುಲಾಬಿ, ಕನಕಾಂಬರ, ಮಲ್ಲಿಗೆ ಇನ್ನಿತರೆ ಹೂಗಳಿಂದ ವಿಶೇಷ ಪುಷ್ಪಾಲಂಕಾರ ಸೇವೆ ನೆರವೇರಿತು. 

ಬೆಳಗ್ಗೆ 11.30ರಿಂದ ರಾತ್ರಿ 10ರ ವರೆಗೂ ಸಾವಿರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಹಣ್ಣು, ಕಾಯಿಯೊಂದಿಗೆ ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆಯಲ್ಲೂ ಹಲವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.