ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ನಂದನ ಹೊಸೂರು ಗ್ರಾಮದ ಗ್ರಾಮದೇವತೆ ಹುತ್ತದ ಕೆಂಚಮ್ಮ ದೇವಿಯ ಆರತಿ ಬಾನೋತ್ಸವ, ಹೂವಿನ ಪಲ್ಲಕ್ಕಿ ಮಹೋತ್ಸವ, ಮಹಾಮಂಗಳಾರತಿ ಸೇವೆ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಮಹೋತ್ಸವದ ಅಂಗವಾಗಿ ಗ್ರಾಮದ ರಾಜ ಬೀದಿಗಳಲ್ಲಿ ಭವ್ಯ ಮೆರವಣಿಗೆ ಸಾಗಿತು. ವಿವಿಧ ಗೋರಪ್ಪರಿಂದ ದೋಣಿಸೇವೆ ಜರುಗಿತು. ಅಣ್ಣಪ್ಪ ತಂಡದವರು ದೇವಿ ಮಹಾತ್ಮೆ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಭಕ್ತರು ಮೀಸಲು ಸಮರ್ಪಿಸಿ ಊರಿನ ಒಳಿತಿಗಾಗಿ ಪ್ರಾರ್ಥಿಸಿದರು. ನಂತರ ಅನ್ನದಾಸೋಹದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.