ಚಿತ್ರದುರ್ಗ: ನಗರದಲ್ಲಿ ಪುಷ್ಪ-2 ತೆಲುಗು ಚಿತ್ರ ಪ್ರದರ್ಶನ ರದ್ದುಗೊಳಿಸಿ, ಕನ್ನಡ ಚಿತ್ರ ಪ್ರದರ್ಶಿಸುವಂತೆ ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಕನ್ನಡ ಸಿನಿಮಾ ಧೀರ ಭಗತ್‌ರಾಯ್ ಪ್ರದರ್ಶನ ನಡೆಸಲು ಚಿತ್ರಮಂದಿರಗಳ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
69ನೇ ಕನ್ನಡ ರಾಜ್ಯೋತ್ಸವ, 50ನೇ ಸುವರ್ಣ ಕರ್ನಾಟಕ ಮಹೋತ್ಸವ ಆಚರಣೆಯ ವೇಳೆ ಕನ್ನಡ ಚಿತ್ರಗಳನ್ನು ಪ್ರದರ್ಶಿಸದೆ, ವೆಂಕಟೇಶ್ವರ ಮತ್ತು ಪ್ರಸನ್ನ ಚಿತ್ರಮಂದಿರದಲ್ಲಿ ಪುಷ್ಪ-2 ಪ್ರದರ್ಶನ ಮಾಡುತ್ತಿದ್ದು, ಕನ್ನಡ ಭಾಷೆಗೆ ಅವಮಾನ ಮಾಡಿದ ಚಿತ್ರಮಂದಿರಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಅಧ್ಯಕ್ಷೆ ವೀಣಾ ಗೌರಣ್ಣ, ಪದಾಧಿಕಾರಿಗಳಾದ ನಿಸಾರ್ ಅಹ್ಮದ್, ಎಸ್.ಗೋಪಿನಾಥ, ಅವಿನಾಶ್, ಪಿ.ಆರ್.ಹರೀಶ್‌ಕುಮಾರ್, ನಾಗೇಶ್ ಇತರರಿದ್ದರು.