ಜಿಲ್ಲೆ

ಪುಲ್ವಾಮಾ ಹುತಾತ್ಮ ಯೋಧರಿಗೆ ನಮನ

ಕಲಬುರಗಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಮತ್ತು ನೇತಾಜಿ ಸುಭಾಷ್ಚಂದ್ರ ಬೋಸ್ ಮಾಜಿ ಸೈನಿಕರ ಸಂಘದಿಂದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎರಡು ನಿಮಿಷ ಮೌನಾಚರಣೆ ಮಾಡಿ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಯಿತು.
ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಗೌರವಾಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ, ನೇತಾಜಿ ಸುಭಾಷ್ಚಂದ್ರ ಬೋಸ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಡಿವಾಳ, ಶಿವಪುತ್ರಪ್ಪ, ರಾಮು ಪವಾರ್, ಕೃಷ್ಣ, ತಾತಗೌಡ ಪಾಟೀಲ್, ರವೀಂದ್ರ ಮುತ್ತಿನ್, ರಾಜಶೇಖರ ಬಂಡೆ, ಶ್ರೀನಿವಾಸರೆಡ್ಡಿ, ಶ್ವೇತಾ, ಓಂಪ್ರಕಾಶ್, ಸಿದ್ದರಾಜ ಬಿರಾದಾರ್, ಪೂಜಾ ಹಿರೇಮಠ, ಅಶ್ವಿನ್ಕುಮಾರ್, ಅನ್ನಪೂರ್ಣ ಹಿರೇಮಠ, ಮಾಲಾ ಕಣ್ಣಿ, ಸುವರ್ಣ ಮಡಿವಾಳ, ಸುನಿತಾ ಬೆನಕನಹಳ್ಳಿ ಇತರರಿದ್ದರು.
ಹುತಾತ್ಮ ವೀರಯೋಧ ಅಮರ್ ರಹೆ, ದೇಶದ ವೀರ ಯೋಧರಿಗೆ ಜಯವಾಗಲಿ, ಭಾರತ್ ಮಾತಾ ಕೀ ಜೈ, ಸೈನಿಕರಿಗೆ ಜಯವಾಗಲಿ, ವೀರಯೋಧರಿಗೆ ಜಯವಾಗಲಿ ಎಂಬಿತ್ಯಾದಿ ಘೋಷಣೆ ಮೊಳಗಿದವು.