ಚಿಕ್ಕಮಗಳೂರಿನ ಮಲೆನಾಡು ವಿದ್ಯಾಸಂಸ್ಥೆಯ ಸೀತಮ್ಮ ಸರಾಫ್ ರಾಮಚಂದ್ರರಾವ್ ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಶ್ರೀಮತಿ ಶಾಂತಕುಮಾರಿ ರಾಜು ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ಧ ನಗರ ಮಟ್ಟದ ಅಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಕುರಿತ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರೊ.ಹಸೀನಾ ಬಾನು, ರಾಧಾಸುಂದ್ರೇಶ್, ಜಗದೀಶ್, ಎನ್.ಕೇಶವಮೂರ್ತಿ ಮತ್ತಿತರರಿದ್ದರು. 
ಜಿಲ್ಲೆ

ಪುರಾತನ ಇತಿಹಾಸ ಪರಿಚಯಿಸಲು ಪ್ರವಾಸಿಗರ ಪಾತ್ರ ಮುಖ್ಯ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ರಾಜಮಹಾರಾಜರ ಸಂಸ್ಥಾನ, ಶಿಲ್ಪಾಕಲೆಗಳು ಹಾಗೂ ಪುರಾತನ ಶಾಸನಗಳ ಇತಿಹಾಸವನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಪ್ರವಾಸಿಗರ ಪಾತ್ರ ಬಹಳಷ್ಟಿದೆ ಎಂದು ಎಂಇಎಸ್ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ಪ್ರೊ.ಹಸೀನಾ ಬಾನು ತಿಳಿಸಿದರು.

ನಗರದ ಬೈಪಾಸ್ ಸಮೀಪ ಮಲೆನಾಡು ವಿದ್ಯಾಸಂಸ್ಥೆಯ ಸೀತಮ್ಮ ಸರಾಫ್ ರಾಮಚಂದ್ರರಾವ್ ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಶ್ರೀಮತಿ ಶಾಂತಕುಮಾರಿ ರಾಜು ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ಧ ನಗರ ಮಟ್ಟದ ಅಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಕುರಿತ ಚರ್ಚಾಸ್ಪರ್ಧೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಬೆಳವಣಿಗೆ, ಸಾಮಾಜಿಕ ಕಳಕಳಿ ಹಾಗೂ ಪ್ರಜ್ಞೆ ಮೂಡಿಸುವ ಸಲುವಾಗಿ ಚರ್ಚಾಸ್ಫರ್ಧೆ ಆಯೋಜಿಸಲಾಗಿದೆ. ಪ್ರವಾಸೋದ್ಯಮ ಒಳಿತು ಅಥವಾ ಮಾರಕ ಎಂಬುವುದರ ವಿಷಯದಡಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಶಾಲೆ ಮುಂದಾಗುವ ಮೂಲಕ ಸಾಮಾಜಿಕ ಅರಿವು ಹಮ್ಮಿಕೊಂಡಿದೆ ಎಂದರು.

ಇಡಿ ವಿಶ್ವಾದ್ಯಂತ ಪ್ರವಾಸೋದ್ಯಮ ಎಂಬುದು ಅತಿದೊಡ್ಡ ಉದ್ಯಮವಾಗಿ ಬೆಳೆದಿದೆ. ಈ ಪ್ರಕ್ರಿಯೆ ಈಚೆಗೆ ಆರಂಭಗೊAಡಿದ್ದಲ್ಲ, ಅನಾದಿ ಕಾಲದಿಂದ ಅಲೆಮಾರಿ ಸಮಾಜ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜೀವನ ಪದ್ಧತಿ ಅಳವಡಿಸಿಕೊಳ್ಳುವ ಸಲುವಾಗಿ ಪ್ರವಾಸ ಕೈಗೊಂಡು ನೆಮ್ಮದಿ, ಹಿತ, ಸಂತೋಷದಿA ದ ಜೀವನ ಸಾಗಿಸಲು ರೂಢಿಸಿಕೊಂಡಿದ್ದರು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಅನೇಕರು ಪ್ರಕೃತಿದತ್ತ ಸಂಪನ್ಮೂಲವನ್ನು ಹಾಳುಗೆಡವುವ ಕಾಯಕದಲ್ಲಿ ತೊಡಗಿದ್ದಾರೆ. ಪ್ರವಾಸಕ್ಕೆಂದು ದೇಶದ ಮೂಲೆ ಮೂಲೆಗಳಿಂದ ಪ್ರಖ್ಯಾತ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರು ಎಲ್ಲೆಂದರಲ್ಲಿ ಅಸ್ವಚ್ಚತೆ, ಕಸದ ರಾಶಿಯನ್ನು ನಿರ್ಮಿಸಿ ಪರಿಸರವನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತದ ಇತಿಹಾಸ, ಪಳೆಯುಳಿವಿಕೆ ಯಾವುದೇ ದೇಶಕ್ಕೆ ಸರಿಸಾಟಿಯಿಲ್ಲ. ಇಂಥ ಮಾಹಿತಿಯನ್ನು ವಿಶ್ವಾದ್ಯಂತ ಪಸರಿಸಲು ಕಾರಣಕರ್ತರು ಪ್ರವಾಸಿಗರೇ ಎಂದ ಅವರು ಪಠ್ಯದಲ್ಲಿ ಓಡಿ ಗ್ರಹಿಸುವುದಕ್ಕಿಂತ ನೇರವಾಗಿ ಪ್ರವಾಸಿ ತಾಣಗಳಿಗೆ ತೆರಳಿ ಸಮಗ್ರ ಮಾಹಿತಿ ಕಲೆಹಾಕುವ ಮುಖಾಂತರ ಪುರಾತನ ಸಂಸ್ಕೃತಿ ಪರಿಚಯಕ್ಕೆ ಕಾರಣೀಭೂತರು ಎಂದರು.

ಎAಇಎಸ್ ಉಪಾಧ್ಯಕ್ಷೆ ರಾಧಾಸುಂದ್ರೇಶ್ ಮಾತನಾಡಿ, ಪ್ರಸ್ತುತ ಕಾಲಮಾಲಕ್ಕೆ ಪ್ರವಾಸೋದ್ಯಮ ಕುರಿತ ಚರ್ಚಾ ಸ್ಪರ್ಧೆ ಪೂರಕವಾಗಿದೆ. ಯಾವುದೇ ವ್ಯವಸ್ಥೆ ಸಮಗ್ರವಾಗಿರಲು ಆಡಳಿತ ಹಾಗೂ ಜನಭಾಗಿತ್ವದ ಅವಶ್ಯಕತೆಯಿದೆ. ಪ್ರವಾಸೋದ್ಯಮ ಹೆಸರಿನಲ್ಲಿ ಶಿಸ್ತು ನಿಯಮ ರೂಪಿಸದಿದ್ದಲ್ಲಿ ಭವಿಷ್ಯದಲ್ಲಿ ಮಲೆನಾಡು ಕಲುಷಿತಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಸ್ಪರ್ಧೆಯ ತೀರ್ಪುಗಾರ ಜಗದೀಶ್ ಮಾತನಾಡಿ, ಪ್ರಬಂಧ ಸ್ಪರ್ಧೆಗೆ ನೀಡಿರುವ ವಿಷಯನ್ನು ಇನ್ನಷ್ಟು ಪರಿಪೂರ್ಣವಾಗಿ ಅರ್ಥೈಸಿಕೊಳ್ಳಬೇಕು. ಸಮಾಜಕ್ಕೆ ಪ್ರವಾಸೋದ್ಯಮ ಒಳಿತೇ ಅಥವಾ ಕೆಡುಕೇ ಎಂಬುದನ್ನು ಅರಿಯಬೇಕು. ವ್ಯಾಪಾರ ದೃಷ್ಟಿಯಿಂದ ಪ್ರವಾಸೋದ್ಯಮ ಪೂರಕವಾದರೆ, ಇನ್ನೊಂದೆಡೆ ಪ್ರಕೃತಿ ಸಂಪತ್ತು ಹಾನಿಗೆ ಮುಂದಾಗಿವೆ ಎಂದು ಹೇಳಿದರು.

ಇದೇ ವೇಳೆ ಚರ್ಚಾಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಂಇಎಸ್ ಅಧ್ಯಕ್ಷ ಎನ್.ಕೇಶವಮೂರ್ತಿ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ವಿ.ಷಡಾಕ್ಷರಿ, ಕಚೇರಿ ವ್ಯವಸ್ಥಾಪಕಿ ಶ್ರೀಲಕ್ಷ್ಮೀ, ಶಿಕ್ಷಕ ಸದಾಶಿವ, ತೀರ್ಪುಗಾರ ಗಂಗಾಧರಪ್ಪ ಮತ್ತಿತರರಿದ್ದರು.