ಕೊಪ್ಪ ಎ.ಎಲ್.ಎನ್. ರಾವ್ ಸ್ಮಾರಕ ಆಯುರ್ವೇದ ಕಾಲೇಜಿನಲ್ಲಿ ಯೋಗಾಭ್ಯಾಸ ಮಾಡಲಾಯಿತು. 
ಜಿಲ್ಲೆ

ಪುರಭವನದಲ್ಲಿ ಯೋಗಾಭ್ಯಾಸ

ಎಸ್.ಎನ್.ರವೀಂದ್ರ

ಕೊಪ್ಪ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ತಾಲೂಕಿನ ಹಲವಡೆ ಯೋಗ ಪ್ರದರ್ಶನ ನಡೆಯಿತು.

ಪ್ರಬೋಧಿನಿ ಯೋಗ ಬಳಗದಿಂದ ಪುರಭವನದಲ್ಲಿ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಪಬ್ಲಿಕ್ ಸ್ಕೂಲ್, ಎ.ಎಲ್.ಎನ್ ರಾವ್ ಸ್ಮಾರಕ ಆಯುರ್ವೇದ ಕಾಲೇಜು, ಮುರಾರ್ಜಿ ದೇಸಾಯಿ ವಸತಿ ಶಾಲೆ, ಬಿಜೆಪಿ ಕಚೇರಿಯಲ್ಲಿ ಯೋಗ ದಿನ ಆಚರಿಸಲಾಯಿತು. ಏಳು ದಿನಗಳಿಂದ ಯೋಗದಿನದ ನಿಮಿತ್ತ ಎ.ಎಲ್.ಎನ್ ರಾವ್ ಸ್ಮಾರಕ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಶಾಲೆಗಳಲ್ಲಿ ಯೋಗಾಭ್ಯಾಸ ತರಬೇತಿ ನೀಡಿದ್ದರು.