ನಂಜನಗೂಡು: ಕರ್ನಾಟಕ ಸಂಗೀತದ ಪಿತಾಮಹ ಶ್ರೀ ಪುರಂದರದಾಸರು ಕರ್ನಾಟಕ ಸಂಗೀತಕ್ಕೆ ಅಡಿಪಾಯ ಹಾಕಿದ್ದಾರೆ ಎಂದು ತಗಡೂರು ಗೋಪಿನಾಥ್ ತಿಳಿಸಿದರು.
ಇತ್ತೀಚೆಗೆ ಪಟ್ಟಣದ ವಿದ್ಯಾನಗರದ ‘ಶಂಕರ ಸದನ’ದಲ್ಲಿ ಶ್ರೀ ತ್ಯಾಗರಾಜರು ಮತ್ತು ಪುರಂದರದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಸುನಾದ ವಿನೋದಿನಿ ಸಂಸ್ಥೆಯ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರೀರಾಮನ ಪರಮ ಭಕ್ತ ಕರ್ನಾಟಕದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ರೀ ತ್ಯಾಗರಾಜರು ತಮ್ಮ ಸಂಕೀರ್ಣವಾದ ಸಂಯೋಜನೆಗಳಿಂದ ಕರ್ನಾಟಕ ಸಂಗೀತವನ್ನು ಸುವರ್ಣ ಅವಧಿಗೆ ತಲುಪಿಸಿದ್ದಾರೆ ಎಂದರು.
ವಿದೂಷಿ ಡಾ.ಬಿ.ಎನ್.ಮಂಜುಳಾ ಮತ್ತು ನಾಗರತ್ನ ಹಾಗೂ ಶಿಷ್ಯ ವೃಂದದವರಿಂದ ಪಂಚರತ್ನ ಗೀತೆಗಳ ಗಾಯನಗೋಷ್ಠಿ ನೆರವೇರಿತು. ಚಂದನ್ ಹಾಗೂ ಅಜಯ್ ಅವರು ವಾದ್ಯಗೋಷ್ಠಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಗಡೂರು ಗೋಪಿನಾಥ್, ಸುನಾದ ವಿನೋದಿನಿ ಸಂಸ್ಥೆಯ ಮುಖ್ಯಸ್ಥರಾದ ಚಂದ್ರಿಕಾ, ಡಾ.ಮಂಜುಳಾ, ನಾಗರತ್ನ, ರಮ್ಯಾ, ರಾಘವೇಂದ್ರ, ನಾಗರಾಜ್, ಸಂಗೀತ ಶಿಕ್ಷಕಿ ಸುಮಾ ನಾಗರಾಜ್, ಶ್ರೀನಿವಾಸ ರಾವ್, ಇಂದಿರೇಶ್ ಇದ್ದರು.