ಜಿಲ್ಲೆ

ಪುನೀತ್‌ರಾಜ್‌ಕುಮಾರ್ ಕ್ರಿಕೆಟ್ ಟೂರ್ನಿ ಮೇ 1ರಿಂದ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಯುವರತ್ನ ಕ್ರಿಕೆಟರ್ಸ್‌, ಐಕಾನ್ ಸ್ಟಾರ್ಸ್‌ ಹಾಗೂ ಜೆಜೆ ಹಟ್ಟಿ ಗೆಳೆಯರ ಬಳಗದಿಂದ 2 ನೇ ಬಾರಿಗೆ ಮೇ 1ರಿಂದ 4 ರವರೆಗೆ ಪುನೀತ್‌ರಾಜ್‌ಕುಮಾರ್ 50 ನೇ ಹುಟ್ಟು ಹಬ್ಬದ ಅಂಗವಾಗಿ ದುರ್ಗನ್ಸ್ ಪುನೀತ್ ರಾಜಕುಮಾರ್ ಕ್ರಿಕೆಟ್ ಟೂರ್ನಿ ಏರ್ಪಡಿಸಲಾಗಿದೆ ಎಂದು ಯುವರತ್ನ ಕ್ರಿಕೆಟರ್ಸ್‌ ಸಮಿತಿ ಸದಸ್ಯ ಅರ್ಜುನ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1 ರಂದು ಬೆಳಗ್ಗೆ 10 ಗಂಟೆಗೆ ಪಂದ್ಯಾವಳಿ ಉದ್ಘಾಟನೆಯಾಗಲಿದೆ. 4 ರಂದು ಸಮಾರೋಪವಿರುತ್ತದೆ. ಇದರಲ್ಲಿ ನಗರದ ನಾನಾ ಗಣ್ಯರು ಪಾಲ್ಗೊಳ್ಳುತ್ತಾರೆ. ಇದು ಎರಡನೇ ವರ್ಷದ ಪಂದ್ಯಾವಳಿಯಾಗಿದ್ದು, ಇದರಲ್ಲಿ 12 ತಂಡಗಳು ಪಾಲ್ಗೊಳ್ಳಲಿವೆ. ಪ್ರಥಮ ಬಹುಮಾನವಾಗಿ 1.50 ಲಕ್ಷ ರೂ., ದ್ವಿತೀಯ 75 ಸಾವಿರ ರೂ.ಗಳೊಂದಿಗೆ ಟ್ರೋಫಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಸರಣಿ ಶ್ರೇಷ್ಠ, ಉತ್ತಮ ಬ್ಯಾಟ್ಸ್‌ಮನ್, ಉದಯೋನ್ಮುಖ ಆಟಗಾರ, ಉತ್ತಮ ಬೌಲರ್‌ಗೆ ಬಹುಮಾನ ನೀಡಲಾಗುವುದು ಎಂದರು.

ನಗರಸಭೆ ಸದಸ್ಯ ಸೈಯದ್ ನಸ್ರುಲ್ಲಾ, ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ಪ್ರದಾನ ಮಾಡುವ ಟ್ರೋಫಿ ಹಾಗೂ ಕ್ರೀಡಾಪಟುಗಳಿಗೆ ಕೊಡುವಂಥ ಜರ್ಸಿ ಬಿಡುಗಡೆ ಮಾಡಿದರು. ರಂಗನಾಥ್, ನಾಗರಾಜ್, ಚೇತನ್, ಇರ್ಫಾನ್, ಶಂಕರ್‌ಮೂರ್ತಿ, ಸಲ್ಮಾನ್‌ಖಾನ್ ಇತರರಿದ್ದರು.

-----