ಜಿಲ್ಲೆ

ಪುನೀತ್ ರಾಜಕುಮಾರ್ ಪ್ರತಿಮೆ ಮುಂದೆ ಇದ್ದ ಕಟೌಟ್ ಮತ್ತು ಬ್ಯಾನರ್ ತೆರವು

ಹಾಸನ: ನಗರದ ಎನ್.ಆರ್.ವೃತದಲ್ಲಿರುವ ದಿ. ಪುನೀತ್ ರಾಜಕುಮಾರ್ ಪ್ರತಿಮೆ ಸುತ್ತ ಜಾಹೀರಾತುಗೆ ಸಂಬಂಧಿಸಿದ ಕಟೌಟ್ ಮತ್ತು ಬ್ಯಾನರ್ ಹಾಕಲಾಗಿತ್ತು. ಇದನ್ನ ಡಾ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ತೆರವುಗೊಳಿಸಿ, ಮುಂದೆ ಈ ರೀತಿ ಹಾಕದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಎನ್.ಆರ್. ವೃತ್ತದಲ್ಲಿ ಪುನೀತ್ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಈ ಭಾಗದಲ್ಲಿ ಸಾಕಷ್ಟು ಜಾಹಿರಾತುಗೆ ಸಂಬಂಧಿಸಿದ ಬ್ಯಾನರ್‌ಗಳನ್ನ ಹಾಕುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರಸಭೆಗೆ ಮನವಿ ಸಲ್ಲಿಸಿಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.

ಆದರೂ ಕೂಡ ಪದೇ ಪದೇ ಬೃಹತ್ ಆಕಾರದ ಕಟೌಟ್‌ಗಳನ್ನು ಹಾಕುವ ಮೂಲಕ ಪ್ರತಿಮೆ ಕಾಣದಂತೆ ಮುಚ್ಚಲಾಗುತ್ತದೆ.ಇದರಿಂದ

ಆಕ್ರೋಶಗೊಂಡ ಡಾ. ಶಿವರಾಜಕುಮಾರ್ ಅಭಿಮಾನಿ ಸಂಘದವರು ಎಲ್ಲಾ ಬ್ಯಾನರ್‌ಗಳನ್ನು ತೆರವುಗೊಳಿಸಿದರು.

ಸಂಘದ ಅಧ್ಯಕ್ಷ ರತೀಶ್ ಕುಮಾರ್ ಮಾತನಾಡಿ, ಪುನೀತ್ ರಾಜಕುಮಾರ್ ಪ್ರತಿಮೆ ಮುಂಭಾಗ ಯಾರು ಬ್ಯಾನರ್ ಹಾಕದಂತೆ ಸಾರ್ವಜನಿಕರಿಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು ಕೂಡ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇದೇ ರೀತಿ ಮುಂದುವರೆದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅಭಿಮಾನಿ ಸಂಘದ ಶಂಕರ್, ಹಿರೇಮಂಗಳೂರು ರವಿ, ಜೀವನ್, ಕುಮಾರ್ ಸೇರಿದಂತೆ ಇನ್ನಿತರರು ಇದ್ದರು