ಬಳ್ಳಾರಿ : ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷ. ಲೋಕಸಭಾ ಚುನಾವಣೆಯಲ್ಲಿಯೂ ಗೆಲ್ಲುವ ಮೂಲಕ ಇಡೀ ಜಿಲ್ಲೆಯ ಜನಪ್ರತಿನಿಧಿಗಳ ಚುಕ್ಕಾಣಿ ಹಿಡಿದಿದೆ. ಈ. ತುಕರಾಮ್ ಅವರ ವಿಜಯ ಪತಾಕೆ ಮುಂದುವರೆಸಿ ದ್ದಾರೆ. ಮೊದಲ ಬಾರಿಗೆ ಸಂಸದರಾಗಿ ಸಂಸತ್ ಮೆಟ್ಟಿಲು ಹತ್ತಿದ್ದಾರೆ.
ಸಂಸತ್ತಿನಲ್ಲಿ ಬಿಜೆಪಿ ಭದ್ರಕೋಟೆಯಲ್ಲಿ ಬೇಧಿಸುವಲ್ಲಿ ಕಾಂಗ್ರೆಸ್ ಸಂಘಟಿತ ಹೋರಾಟ ಫಲನೀಡಿದೆ. ಕ್ಷೇತ್ರದಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರ ಪೈಕಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚಿನ ಮತ ಪಡೆಯುವ ಮೂಲಕ ಕಾಂಗ್ರೆಸ್ ನ ಐದು ಗ್ಯಾರಂಟಿಗಳು ಕಾಂಗ್ರೆಸ್ ಗೆಲುವಿನ ಕೈಯನ್ನು ಬಲಪಡಿಸಿವೆ.
ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಬಿಜೆಪಿ 2004ರಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿತ್ತು. ಎರಡು ದಶಕದ ಬಳಿಕೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಫಲವಾಗಿದೆ. 2018ರಲ್ಲಿ ಉಪಚುನಾವಣೆಯಲ್ಲಿ ಒಂದು ವರ್ಷದ ಮಟ್ಟಿಗೆ ಮಾತ್ರ ವಿ.ಎಸ್.ಉಗ್ರಪ್ಪ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ, 2019ರಲ್ಲಿ ಸಾರ್ವಜನಿಕ ಚುನಾಚಣೆಯಲ್ಲಿ ಕ್ಷೇತ್ರವು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಈ ಬಾರಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಾಯಕಿ ಸೋನಿಯಾ ಗಾಂಧಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಮತ ಎಣಿಕೆಯ 19 ಸುತ್ತುಗಳಲ್ಲಿಯೂ ಒಂದು ಸುತ್ತನಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂತ ಬಿಜೆಪಿ ಅಭ್ಯರ್ಥಿ ಲೀಡ್ ತೆಗೆದುಕೊಳ್ಳಲಿಲ್ಲ. ಎಂಟು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರಿಗೆ ತಿಳಿಸುವಲ್ಲಿ ಸಫಲವಾಯಿತು. ಸತತ ನಾಲ್ಕು ಬಾರಿ ಸಂಡೂರು ಕ್ಷೇತ್ರದಲ್ಲಿ ಶಾಸಕರಾಗಿ ಗೆದ್ದಿರುವ ಈ. ತುಕರಾಮ್ ಸರಳತೆಯಿಂದ ಎಲ್ಲರ ಮನಗೆದ್ದರಿದ್ದರು. ಇದೀಗ ಅವಳಿ ಜಿಲ್ಲೆಗಳ ಮತದಾರರ ಮನ ಗೆದ್ದಿದ್ದಾರೆ. ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಲಿ ಶಾಸಕರು ಅಭ್ಯರ್ಥಿ ಪರ ಶ್ರಮಿಸಿ ಗೆಲುವಿಗೆ ತಮ್ಮದೆ ರೀತಿಯಲ್ಲಿ ಕಾಣಿಕೆ ನೀಡಿದ್ದಾರೆ. ಮೂವರು ಸಚಿವರಾದ ಬಿ.ನಾಗೇಂದ್ರ, ಜಮೀರ್ ಮತ್ತು ಸಂತೋಷ್ ಲಾಡ್ ಅವರು ಈ ಬಾರಿ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದ ಪ್ರತಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿ, ತಾನೇ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಂಡು ಕಾಲಿಗೆ ಟೊಂಕ ಕಟ್ಟಿದ್ದರು. ಎರಡು ಜಿಲ್ಲೆಯಲ್ಲಿ ಸಚಿವ ಜಮೀರ್ ಆಹ್ಮದ್ ಮುಸ್ಲಿಂ ಮತ ಸೆಳೆಯುವಲ್ಲಿ ಹಾಗೂ ಸಂತೋಷ್ ಲಾಡ್ ಸಂಡೂರು, ಕಂಪ್ಲಿ ಸೇರಿದಂತೆ ಕೆಲ ಭಾಗಗಳಲ್ಲಿ ಬಿಗಿ ಹಿಡಿತ ಸಾಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಅನುಕಂಪ ಬಳಸಿಕೊಳ್ಳುವಲ್ಲಿ ವಿಫಲರಾದರು. ಕೆಆರ್‌ಪಿಪಿ ಪಕ್ಷ ಬಿಜೆಪಿ ಯೊಂದಿಗೆ ವಿಲೀನದಿಂದ ಎರಡು ಪಕ್ಷದ ಕಾರ್ಯಕರ್ತರಲ್ಲಿ ಚುನಾವಣೆ ಕೊನೆಯವರೆಗೆ ಒಮ್ಮತ ಮೂಡಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ನೇರಕಾರಣ ಕೆಆರ್‌ಪಿಪಿ ಎಂಬುದು ಕಾರ್ಯಕರ್ತರಲ್ಲಿ ಇನ್ನೂ ಮರೆಯಾಗಿಲ್ಲ. ಆದ್ದರಿಂದ , ಎರಡು ಪಕ್ಷದ ಅಭ್ಯರ್ಥಿಗಳು ಒಮ್ಮೆಯೂ ಪ್ರಚಾರ ನಡೆಸಿದ್ದು ಕಾಣಲಿಲ್ಲ. ಪ್ರಚಾರ ನಡೆಸುವಲ್ಲಿ ಬಿಜೆಪಿ ಅಭ್ಯರ್ಥಿ ಒಂಟಿಯಾದರು. ಪ್ರಧಾನಿ ಮೋದಿ ಅಲೆಯಲ್ಲಿ ಕ್ಷೇತ್ರ ಗೆಲ್ಲುವೆ ಎಂಬ ಅತಿಯಾದ ಆತ್ಮವಿಶ್ವಾಸ ಬಿಜೆಪಿ ಯುವರಿಗೆ ಇತ್ತು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಗಣಿನಾಡು ಬಳ್ಳಾರಿಯನ್ನು ಕಾಂಗ್ರೆಸ್ ಭದ್ರಕೋಟೆಯಾಗಿ ನಿರ್ಮಿಸಿದ್ದರು. ಬಳಿಕ ರೆಡ್ಡಿ ಸಹೋದರರ ಪಾರುಪತ್ಯದಿಂದ ಕಾಂಗ್ರೆಸ್ ಕೋಟೆ ಛಿದ್ರಾ ಮಾಡುವಲ್ಲಿ ಯಶ್ವಸಿಯಾಗಿದ್ದರು. ಎರಡು ದಶಕಗಳ ಬಳಿಕ ಮಹಾನಗರ ಪಾಲಿಕೆಯಿಂದ ಹಿಡಿದು ದೆಹಲಿಯವರೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಚುಕ್ಕಾಣಿ ಹಿಡಿದಿದೆ. ಇತ್ತೀಚೆಗೆ ನಡೆದ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮುಲು ಸೋತರೆ, ಶಾಸಕ ಈ.ತುಕರಾಮ್ ಅವರಿಗೆ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮತದಾರರು ಆರ್ಶಿವಾದ ಮಾಡಿದರು ಎನ್ನಬಹುದು.