ಜಿಲ್ಲೆ

ಪುತ್ರಿ ಸಾವು ಆರೋಪ: ಪತಿ ಕುಟುಂಬದ ಪತ್ತೆಗೆ ಬ್ಯಾನರ್

ಕಲಬುರಗಿ: ವರದಕ್ಷಿಣೆ ತೆಗೆದುಕೊಂಡು ಬಾ ಚಿತ್ರಹಿಂಸೆ ನೀಡಿ ನನ್ನ ಮಗಳ ಸಾವಿಗೆ ಕಾರಣರಾಗಿ ನಾಪತ್ತೆಯಾಗಿರುವ ಗಂಡ, ಅತ್ತೆ, ನಾದಿನಿಯರು ಕಂಡು ಬಂದರೆ ಮಾಹಿತಿ ನೀಡುವಂತೆ ಮೃತಳ ತಂದೆಯೂ ನಾಲ್ವರ ಭಾವಚಿತ್ರಗಳ ಸಹಿತ ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಕಟ್ಟಿದ್ದಾರೆ.
ತೆಲಂಗಾಣದ ನಾರಾಯಣಪೇಟೆ ಜಿ¯್ಲÉಯ ಮಕ್ತಾಲ್ ತಾಲೂಕಿನ ಗುಡೆಬಲ್ಲೂರು ಮೂಲದ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ (ಆರ್‌ಟಿಪಿಎಸ್) ಸಹಾಯಕ ಚನ್ನಪ್ಪಗೌಡ ನಗರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿನ ಟಿಪ್ಪು ಚೌಕ್ ಸಮೀಪ ಬ್ಯಾನರ್ ಕಟ್ಟಿದವರು.
ಸೇಡಂ ತಾಲೂಕಿನ ಶಂಕರಪಲ್ಲಿ ಗ್ರಾಮದ ಸಿದ್ದಾರಡ್ಡಿ, ಸಾವಿತ್ರಮ್ಮ ಅವರ ಪುತ್ರ, ಇಂಜಿನಿಯರ್ ಶಂಕರರೆಡ್ಡಿಗೆ ಕೊಟ್ಟು ಮದುವೆ ಮಾಡಲಾಗಿದೆ. ವರ್ಷದ ಹಿಂದೆ ಅನಾರೋಗ್ಯದ ಕಾರಣಕ್ಕೆ ಮಗಳನ್ನು ಆಸ್ಪತ್ರೆಗೆ ದಾಖಲಿಸಿದಾಗ ೨೦೨೩ ಅ.೨೩ರಂದು ಮೃತಪಟ್ಟಿದ್ದಳು. ಶಂಕರರೆಡ್ಡಿ ವೈದ್ಯೆಯಾಗಿದ್ದು, ವರದಕ್ಷಿಣೆ ಕಿರುಕುಳಕ್ಕೆ ಏನಾದರೂ ಮಾಡಿರುವ ಅನುಮಾನ ಬಂದಿತ್ತು ಎಂದು ಚನ್ನಪ್ಪಗೌಡ ವಿಜಯವಾಣಿಗೆ ತಿಳಿಸಿದರು.
ಕಿರುಕುಳ ನೀಡಿ ಮಗಳನ್ನು ಸಾಯಿಸಿದ್ದಾರೆ ಎಂದು ಶಕ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾಗ ಸಚಿವರೊಬ್ಬರು ಮಧ್ಯಪ್ರವೇಶಿಸಿ, ಹಣ ಕೊಡಿಸುತ್ತೇನೆ ದೂರು ಬೇಡ ಎಂದಿದ್ದರಿAದ ಸುಮ್ಮನಿz್ದÉÃವು. ಮಗಳ ಸಾವಿಗೆ ಪ್ರತಿಯಾಗಿ ಮೊಮ್ಮಗಳನ್ನು ನೀಡುತ್ತೇವೆ, ಅವಳ ಪೋಷಣೆಗೆ ೧೦ ಲಕ್ಷ ರೂ, ೧೦ ಎಕರೆ ಜಮೀನು, ೧೦ ತೊಲೆ ಬಂಗಾರ, ಕೊಡುವುದಾಗಿ ಭರವಸೆ ನೀಡಿ, ಬಿಳಿ ಕಾಗದದ ಮೇಲೆ ಒಪ್ಪಂದ ಪತ್ರ ಬರೆದಿದ್ದರು. ಇದೀಗ ಆ ಪತ್ರಕ್ಕೆ ಮಾನ್ಯತೆ ಇಲ್ಲ ಎನ್ನುತ್ತಿದ್ದಾರೆ. ಮೊಮ್ಮಗಳನ್ನು ಕೊಡದೇ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು. ಮಗಳನ್ನು ಕಳೆದುಕೊಂಡಿz್ದÉÃವೆ. ಮೊಮ್ಮಗಳನ್ನಾದರೂ ಕೊಡಲಿ ಎಂದು ಕಲಬುರಗಿ, ಸೇಡಂ, ಶಂಕರಪಲ್ಲಿಯಲ್ಲಿ ಬ್ಯಾನರ್‌ಗಳನ್ನು ಕಟ್ಟಿz್ದÉÃನೆ ಎಂದು ಹೇಳಿದರು.