ಮಂಗಳೂರು: ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಅಕ್ರಮವಾಗಿ ದಾಸ್ತಾನಿಟ್ಟು ಮದ್ಯ ಮಾರಾಟ ಮಾಡುತ್ತಿದ್ದಲ್ಲಿಗೆ ಪುತ್ತೂರು ನಗರ ಠಾಣೆ ಪೊಲೀಸರು ದಾಳಿ ನಡೆಸಿ 26,118 ರೂ. ಮೌಲ್ಯದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆಮ್ಮಿಂಜೆ ಗ್ರಾಮದ ನೈತಾಡಿ ಮನೆ ಬಾಬು ಪೂಜಾರಿ ( 48 ), ಕಲ್ಲಗುಡ್ಡೆ ಮನೆ ಗಣೇಶ (32) ಬಂಧಿತರು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಬಾಬು ಪೂಜಾರಿಯವರ ಮನೆಯ ಹಿಂದುಗಡೆ ಗುಡ್ಡ ಜಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಖಚಿತವಾಗಿದೆ. ಸ್ದಳಕ್ಕೆ ದಾಳಿ ಮಾಡಿದಾಗ ಆರೋಪಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ Original choice deluxe Whisky ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಸ್ಯಾಚೆಟ್ ಗಳು-218 ( ಇದರ ಅಂದಾಜು ಮೌಲ್ಯ ರೂ 15,260/- ಆಗ ಬಹುದು) Original choice deluxe Whisky ಎಂದು ಬರೆದಿರುವ ತಲಾ 90 ಎಂ ಎಲ್ ನ ಮದ್ಯ ತುಂಬಿದ ಸ್ಯಾಚೆಟ್ ಗಳು-59( ಇದರ ಅಂದಾಜು ಮೌಲ್ಯ ರೂ 2,065/- ಆಗ ಬಹುದು) BAGPIPER WHISKY ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಸ್ಯಾಚೆಟ್ ಗಳು – 15( ಇದರ ಅಂದಾಜು ಮೌಲ್ಯ ರೂ 1,590/- ಆಗ ಬಹುದು) BLACK FORT ಎಂದು ಬರೆದಿರುವ ತಲಾ 330 ಎಂ ಎಲ್ ನ ಬಿಯರ್ ತುಂಬಿದ ಬಾಟಲಿಗಳು -24( ಇದರ ಅಂದಾಜು ಮೌಲ್ಯ ರೂ 1,488- ಆಗ ಬಹುದು) BLACK FORT ಎಂದು ಬರೆದಿರುವ ತಲಾ 650 ಎಂ ಎಲ್ ನ ಬಿಯರ್ ತುಂಬಿದ ಬಾಟಲಿಗಳು -19( ಇದರ ಅಂದಾಜು ಮೌಲ್ಯ ರೂ 2,180- ಆಗ ಬಹುದು)Officer Choice STAR supreme Whisky ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಸ್ಯಾಚೆಟ್ ಗಳು-5 ( ಇದರ ಅಂದಾಜು ಮೌಲ್ಯ ರೂ 430/- ಆಗ ಬಹುದು)DSP Black Deluxe Whisky ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಬಾಟಲಿಗಳು – 3( ಇದರ ಅಂದಾಜು ಮೌಲ್ಯ ರೂ 525/- ಆಗ ಬಹುದು) Mc Dowell’s No 1 ORIGINAL ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಬಾಟಲಿಗಳು-9( ಇದರ ಅಂದಾಜು ಮೌಲ್ಯ ರೂ 1,780/- ಆಗ ಬಹುದು)ಅಲ್ಲದೇ ಆರೋಪಿಗಳು ಮದ್ಯ ಮಾರಾಟ ಮಾಡಿ ಬಂದ ಹಣ ರೂ800/-ಆಗಿದ್ದು,ಮದ್ಯ ಮತ್ತು ಬಿಯರ್‌ನ ಹಾಗು ಆರೋಪಿಗಳ ವಶದಲ್ಲಿದ್ದ ಒಟ್ಟು ಅಂದಾಜು ಮೌಲ್ಯ ರೂ 26,118 ಆಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.