ಜಿಲ್ಲೆ

ಪುಣ್ಯಸ್ಮರಣೋತ್ಸವ 30ರಂದು

Dharwada - Vikram Nadiger

ಧಾರವಾಡ: ನಗರದ ಪಂ. ಚಂದ್ರಶೇಖರ ಪುರಾಣಿಕಮಠ ಸ್ಮತಿ ಸಂಗೀತ ಸಭಾ ವತಿಯಿಂದ ಜು. 30ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಇಲ್ಲಿನ ಸಾಧನಕೇರಿಯ ಪುರಾಣಿಕಮಠ ಸಭಾಭವನದಲ್ಲಿ ಗ್ವಾಲಿಯರ್ ಘರಾಣೆ ಹಿರಿಯ ಗಾಯಕ ಪಂ. ಚಂದ್ರಶೇಖರ ಪುರಾಣಿಕಮಠರ 13ನೇ ಪುಣ್ಯಸ್ಮರಣೋತ್ಸವ ಏರ್ಪಡಿಸಲಾಗಿದೆ.
ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದ್ದು, ಅತಿಥಿಗಳಾಗಿ ರಂಗಕರ್ಮಿ ಡಾ.ಶಶಿಧರ ನರೇಂದ್ರ ಪಾಲ್ಗೊಳ್ಳುವರು. ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಸದಾಶಿವ ಐಹೊಳೆ ಗಾಯನ ಪ್ರಸ್ತುತ ಪಡಿಸುವರು. ತಬಲಾದಲ್ಲಿ ಪಂ. ಸಾತಲಿಂಗ ದೇಸಾಯಿ ಕಲ್ಲೂರು, ಪಂ.ಅಲ್ಲಮಪ್ರಭು ಕಡಕೋಳ, ಮಳೆಮಲ್ಲೇಶ ಹೂಗಾರ ಹಾಗೂ ಸಂವಾದಿನಿಯಲ್ಲಿ ಪ್ರಮೋದ ಹೆಬ್ಬಳ್ಳಿ ಸಾಥ್ ನೀಡುವರು ಎಂದು ಸ್ಮತಿ ಸಭಾ ಅಧ್ಯಕ್ಷ ಕುಮಾರಸ್ವಾಮಿ ಪುರಾಣಿಕಮಠ ತಿಳಿಸಿದ್ದಾರೆ