ಜಿಲ್ಲೆ

ಪುಣ್ಯಕ್ಷೇತ್ರಗಳ ದರ್ಶನದಿಂದ ಮಾನಸಿಕ ನೆಮ್ಮದಿ

Yadgiri - Laxmikanth Kulkarni


ಯಾದಗಿರಿ: ಪ್ರತಿಯೊಬ್ಬ ಮನುಷ್ಯ ಜೀವಿ ಶೃದ್ಧೆ, ನಿಷ್ಠೆಯಿಂದ ಬಾಳಬೇಕು ಪೂಜೆ-ಪ್ರಾರ್ಥನೆಗಳು ನೆರವೇರಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆಯೆಂದು ಶಾಸಕ ಚೆನ್ನಾರೆಡ್ಡಿ ತುನ್ನೂರು ಹೇಳಿದರು.

ಶನಿವಾರ ತಾಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಆವರಣದಲ್ಲಿ ನವರಾತ್ರಿ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ 7ನೇ ದಿನದ ಶ್ರೀದೇವಿ ಪೂಜಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸಾಂಸಾರಿಕ ಜಂಜಾಟದಲ್ಲಿ ಸಿಲುಕಿಕೊಂಡು, ಭವಬಾಧೆಯಿಂದ ಮನುಷ್ಯ ತೊಳಲಾಡುತ್ತಾನೆ. ಈ ತಾಕಲಾಟದಿಂದ ಮುಕ್ತಿಯನ್ನು ಪಡೆಯಲು ಕ್ಷೇತ್ರಗಳ ದರ್ಶನ, ಮಹಾತ್ಮರ ಆಶೀವರ್ಾದದಿಂದ ಸಾಧ್ಯವಾಗುತ್ತದೆ ಎಂದರು.

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ನವರಾತ್ರಿ ಸಂದರ್ಭದಲ್ಲಿ ಪ್ರತಿಯೊಬ್ಬರು ದೇವಿಯನ್ನು ಬಹಳ ಭಕ್ತಿಯಿಂದ ಆರಾಧಿಸಿಬೇಕು. ಅಂದಾಗ ಮಾತ್ರ ದೇವಿಯ ಒಲುಮೆಗೆ ಪಾತ್ರರಾಗಲು ಸಾಧ್ಯವಾಗುತ್ತದೆ. ಅಷ್ಟ ವಿಧಗಳಿಂದ ದೇವಿಯನ್ನು ಭಜಿಸಿದಾಗ ಬದುಕಿನ ಕಷ್ಟಗಳು ದೂರವಾಗುತ್ತವೆ. ಅಬ್ಬೆತುಮಕೂರಿನಲ್ಲಿ ಭಕ್ತಿ ಭಾವದಿಂದ, ಶೃದ್ಧೆ-ನಿಷ್ಠೆಗಳಿಂದ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರುತ್ತಿರುವದು ಸಂತಸದ ಸಂಗತಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಜೀವನದಲ್ಲಿ ಖಂಡಿತವಾಗಿಯೂ ಒಳ್ಳೆಯದಾಗುತ್ತದೆಯೆಂದು ಹೇಳಿದರು.