ಜಿಲ್ಲೆ

ಪುಣಜನೂರು ಗ್ರಾಮದಲ್ಲಿ ಸಂವಿಧಾನ ಸಮರ್ಪಣ ದಿನ ಆಚರಣೆ

ಚಾಮರಾಜನಗರ: ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿ ಅರಿವು ಕೇಂದ್ರದಲ್ಲಿ  75ನೇ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶಿವಿಭಾಯಿ ಗಣೇಶನಾಯ್ಕ ಅವರು ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಫಲವಾಗಿ ಇಂದು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಜೀವಿಸಲು ಸಾಧ್ಯವಾಗಿದೆ, ಸಂವಿಧಾನದ ಬಲದಿಂದ ಭಾರತವು ಸದೃಢ ರಾಷ್ಟ್ರವಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಗೋವಿಂದರಾಜು, ಗ್ರಾಮ ಪಂಚಾಯತಿ ಸದಸ್ಯರಾದ ಗೀತಾ ಸಿದ್ದರಾಜು, ಸದಸ್ಯರಾದ ಮಹೇಶ್, ಮುಖ್ಯೋಪಾಧ್ಯಾಯರಾದ ವಿ. ಎಸ್ ರತ್ನ, ಮುಖಂಡರಾದ ಶಿವಾಜಿ ನಾಯಕ, ಗಡಿನಾಡು ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಆರ. ಸುರೇಶ್, ಮೇಲ್ವಿಚಾರಕರಾದ ವೆಂಕಟೇಶ್, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಕಬ್ಬಾಳು ನಾಯಕ, ಮುರುಗೇಶ, ಆರತಿ, ಮಾದೇವ, ಮುಖಂಡರಾದ ಸಿದ್ದರಾಜು, ಸಹ ಶಿಕ್ಷಕರಾದ, ಮಲ್ಲಣ್ಣ ಗೀತಾ, ನಗಿನ ಭಾಗವಹಿಸಿದ್ದರು. ನಂತರ ಶಾಲಾ ಮಕ್ಕಳಿಗೆ ಸಂವಿಧಾನದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸಿ ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.