ಬುಕ್ಕಾಪಟ್ಟಣ : ಶಿರಾ ತಾಲೂಕು ಕುರುಬರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪ್ರತಿನಿತ್ಯ ಧೂಮಪಾನ, ಮದ್ಯಪಾನದಂತಹ ಅನೈತಿಕ
ಚಟುವಟಿಕೆಗಳು ನಡೆಸಿ ಮಕ್ಕಳ ಕಲಿಕೆಗೆ ಅಡ್ಡಿಯಾಗಿದ್ದಾರೆ.
ಪ್ರತಿನಿತ್ಯ ಶಾಲೆಗೆ ಬರುವ ವಿದ್ಯಾರ್ಥಿಗಳು ಅವುಗಳನ್ನು ಎತ್ತಿ ಹಾಕಿ ಶಾಲೆಯನ್ನು ಶುಭ್ರಗೊಳಿಸುವ ಕೆಲಸ ಪ್ರತಿನಿತ್ಯ ಮಾಡಬೇಕಾಗಿದೆ. ಕುರುಬರಹಳ್ಳಿಯಲ್ಲಿ ಮದ್ಯ ಅಕ್ರಮ ಮಾರಾಟ ಮಾಡುತ್ತಿರುವ ಬಗ್ಗೆ ಹಲವು ಬಾರಿ ಪೊಲೀಸ್ ಇಲಾಖೆ ಹಾಗೂ ಗ್ರಾಪಂಗೆ ಮನವಿ ಮಾಡಿಕೊಳ್ಳಲಾಗಿದೆ. ಗ್ರಾಪಂ ಹಾಗೂ ಪೊಲೀಸ್ ಸಿಬ್ಬಂದಿ ಈ ಬಗ್ಗೆ ಮದ್ಯ ಅಕ್ರಮ ಮಾರಾಟ ಮಾಡುವ ಅಂಗಡಿಗಳಿಗೆ ಮೌಖಿಕವಾಗಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಶನಿವಾರ ಮತ್ತು ಭಾನುವಾರ ರಜೆ ಇದ್ದ ಕಾರಣ ಸೋಮವಾರ ಶಾಲೆಗೆ ಆಗಮಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ್ದು ಪುಂಡರ ಈ ಅವಶೇಷಗಳು. ಬಹಳಷ್ಟು ಬಾರಿ ರೋಸಿ ಹೋಗಿದ್ದ ವಿದ್ಯಾರ್ಥಿಗಳು ಹಾಗೂ ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಶಾಲೆ ಆವರಣದಲ್ಲಿ ಸೋಮವಾರ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಬಾರಿ ಶಾಲೆಯ ಆವರಣಕ್ಕೆ ನುಗ್ಗಿ ಅನೈತಿಕ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಪ್ರತಿಭಟನೆ ಮಾಡಿ ಗ್ರಾಪಂಗೆ ಮನವಿ ನೀಡಿದ್ದೆವು. ಈ ವೇಳೆ ಪೊಲೀಸರು ಗಸ್ತು ಹೆಚ್ಚಿಸಿದ್ದರು. ಈಗ ಮತ್ತೆ ಅನೈತಿಕ ಚಟುವಟಿಕೆ ಹೆಚ್ಚಾಗಿದೆ. ಕುರುಬರಹಳ್ಳಿಯ ಹಲವು ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡಲಾಗುತ್ತಿದೆ. ಉನ್ನತ ಅಧಿಕಾರಿಗಳು ಇತ್ತ ಗಮನ ಹರಿಸಿ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು.
| ಉಮೇಶ್ ಎಸ್ಡಿಎಂಸಿ ಅಧ್ಯಕ್ಷ ಕುರುಬರಹಳ್ಳಿ ಶಾಲೆ
ಶಾಲೆಯ ಆವರಣದಲ್ಲಿ ಪೋಲಿಪುಂಡರ ಅಟ್ಟಹಾಸದ ಬಗ್ಗೆ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಗ್ರಾಪಂ ಗ್ರಾಮಸಭೆಯಲ್ಲಿ ದೂರು ನೀಡಿದ್ದರು. ಪೊಲೀಸರಿಗೆ ಗಸ್ತು ಹೆಚ್ಚಿಸಲು ಮನವಿ ಮಾಡಿದ್ದೇವು. ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಿದಂತೆ ಮೂಖಿಕವಾಗಿ ಎಚ್ಚರಿಕೆಯನ್ನು ಸಹ ಸ್ವತಹ ನಾವೇ ನೀಡಿದ್ದು, ಇಲಾಖೆಗಳೊಂದಿಗೆ ಸಮನ್ವಯಗೊಳಿಸಿ ಸಮಸ್ಯೆ ಬಗೆಹರಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು.
| ಮಹಮ್ಮದ್ ಕೌಸರ್ ಪಿಡಿಒ ಕುರುಬರಹಳ್ಳಿ