ಜಿಲ್ಲೆ

ಪೀಠಾಧಿಪತಿಯೊಬ್ಬರಿಂದ ಒಳಮೀಸಲು ಆಶಯಕ್ಕೆ ಧಕ್ಕೆ

Chitradurga - Desk - Pranav Kumar

ಚಿತ್ರದುರ್ಗ: ಮಾದಿಗ ಸಮುದಾಯದ ನಾಯಕರಿಗೆ ಸಿಎಂ ಆಗುವ ಅರ್ಹತೆಗಳಿವೆ ಎಂಬ ಪೀಠಾಧಿಪತಿಯೊಬ್ಬರ ಹೇಳಿಕೆಯೂ ಒಳ ಮೀಸಲಾತಿ ಚರ್ಚೆಯಲ್ಲಿ ಆಗಬಾರದಿತ್ತು. ಇದು ಹೋರಾಟದ ಮೂಲ ಆಶಯಕ್ಕೆ ಧಕ್ಕೆ ತರುವ ಪ್ರಯತ್ನ ಎಂದು ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ ದೂರಿದರು.

ಕ್ರೀಡಾಭವನದಲ್ಲಿ ಒಕ್ಕೂಟದ ರಾಜ್ಯ ಘಟಕದಿಂದ ಭಾನುವಾರ ನಡೆದ ಒಳ ಮೀಸಲಾತಿ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಒಳ ಮೀಸಲಾತಿ ಚರ್ಚೆಯಲ್ಲಿ ರಾಜಕಾರಣಿಗಳ ಓಲೈಕೆ ಎಂದಿಗೂ ಮಾಡಬಾರದು. ಸುದೀರ್ಘ ಇತಿಹಾಸ ಹೋರಾಟಕ್ಕಿದೆ. ಆದರೆ, ಸಮುದಾಯದಿಂದ ಪೀಠಾಧಿಪತಿಯಾದವರು ಆರ್.ಬಿ.ತಿಮ್ಮಾಪೂರ, ಕೆ.ಎಚ್.ಮುನಿಯಪ್ಪ ಅವರ ಪೈಕಿ ಯಾರನ್ನಾದರೂ ಸಿಎಂ ಮಾಡುವ ಉತ್ಸಾಹದಲ್ಲಿ ಇದ್ದಂತೆ ಕಾಣುತ್ತಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಈಚೆಗೆ ನಡೆದ ಒಳ ಮೀಸಲಾತಿ ಚಿಂತನ-ಮಂಥನ ಶಿಬಿರದಲ್ಲಿ ಸಮಾಜದ ವೇದಿಕೆ ಬಳಸಿಕೊಂಡಿದ್ದಕ್ಕೆ ಸ್ವಾಮೀಜಿ ಹೆಸರು ಪ್ರಸ್ತಾಪಿಸದೆ, ಕಿಡಿಕಾರಿದರು.