ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿ, ಗಂಗಬಸವನಹಳ್ಳಿ ಗ್ರಾಮಗಳ ಲಕ್ಷಿö್ಮÃ ದೇವಸ್ಥಾನಕ್ಕೆ ಶಾಸಕ ಎಚ್.ಡಿ.ತಮ್ಮಯ್ಯ ಅವರು ತಲಾ ೫ ಲಕ್ಷ ರೂ. ಚೆಕ್ ವಿತರಣೆ ಮಾಡಿದರು. ಗಾಯತ್ರಿ ಶಾಂತೇಗೌಡ, ಸೌಂದರ್ಯ ಜಗದೀಶ್, ಲೋಕೇಶ್, ಗಣೇಶ್ ಮತ್ತಿತರರಿದ್ದರು. 
ಜಿಲ್ಲೆ

ಪಿಳ್ಳೇನಹಳ್ಳಿ ಗ್ರಾಪಂ ಗೆ ೧.೪೮ ಕೋಟಿ ರೂ. ಅನುದಾನ ಬಿಡುಗಡೆ

ಚಿಕ್ಕಮಗಳೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಪಿಳ್ಳೇನಹಳ್ಳಿ ಗ್ರಾಮ ಪಂಚಾಯಿತಿಗೆ ೧.೪೮ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿ, ಗಂಗಬಸವನಹಳ್ಳಿ ಗ್ರಾಮಗಳ ಲಕ್ಷಿö್ಮÃ ದೇವಸ್ಥಾನಕ್ಕೆ ತಲಾ ೫ ಲಕ್ಷ ರೂ. ಚೆಕ್ ವಿತರಿಸಿ ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಬಸವಣ್ಣ, ೧೫ನೇ ಶತಮಾನದಲ್ಲಿ ಕನಕದಾಸರು, ೧೯ನೇ ಶತಮಾನದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಸಮ ಸಮಾಜ ನಿರ್ಮಾಣ ಮಾಡಬೇಕೆಂಬ ಪರಿಕಲ್ಪನೆಯ ಆಶಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪಿಳ್ಳೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗಂಗಬಸವನಹಳ್ಳಿ, ಬ್ಯಾಡರಹಳ್ಳಿ ಭಾಗದ ಚೆಕ್‌ಡ್ಯಾಂ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ೩೦ ಲಕ್ಷ ರೂ. ನೀಡಲಾಗಿದೆ. ಕಾಂಕ್ರೀಟ್ ರಸ್ತೆಗೆ ೧೦ ಲಕ್ಷ ರೂ., ಬಾಕ್ಸ್ ಚರಂಡಿಗೆ ೭ ಲಕ್ಷ ರೂ., ಶಾಲಾ ಶೌಚಗೃಹ ದುರಸ್ಥಿಗೆ ತಾಲೂಕು ಪಂಚಾಯತ್ ಅನುದಾನದಲ್ಲಿ ೧.೫೦ ಲಕ್ಷ ರೂ. ನೀಡಿz್ದೆÃವೆ ಎಂದು ವಿವರಿಸಿದರು.

ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಉz್ದÉÃಶದಿಂದ ರಾಜ್ಯಸರ್ಕಾರ ಅತೀ ಹೆಚ್ಚು ಹಣವನ್ನು ಮೀಸಲಿಟ್ಟು, ಮುರಾರ್ಜಿ, ಅಂಬೇಡ್ಕರ್, ದೇವರಾಜ್ ಅರಸು ವಸತಿ ನಿಲಯಗಳ ಮೂಲಕ ಶಿಕ್ಷಣ ನೀಡುತ್ತಿದೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗಂಗಬಸವನಹಳ್ಳಿ ಮತ್ತು ಬ್ಯಾಡರಹಳ್ಳಿಗೆ ಲಕ್ಷಿö್ಮÃ ದೇವಸ್ಥಾನಕ್ಕೆ ರಾಜ್ಯಸರ್ಕಾರ ತಲಾ ೫ ಲಕ್ಷ ರೂ. ಹಣ ನೀಡಿದೆ. ಇದನ್ನು ಮನಗಂಡು ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಮತನೀಡಬೇಕು ಎಂದು ವಿನಂತಿಸಿದರು,

ಗ್ರಾಮೀಣ ಭಾಗದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಮುಂದಾಗಬೇಕು ಎಂದು ಕರೆನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಸೌಂದರ್ಯ ಜಗದೀಶ್, ಲೋಕೇಶ್, ಗಣೇಶ್, ಈಶ್ವರ್‌ಗೌಡ, ಜಗದೀಶ್, ಕೆಂಚಪ್ಪ ಮತ್ತಿತರರು ಉಪಸ್ಥಿತರಿದ್ದರು.