ಜಿಲ್ಲೆ

ಪಿಯುಸಿಎಲ್ ಮೈಸೂರು ಘಟಕಕ್ಕೆ ಕಮಲ್ ಗೋಪಿನಾಥ್ ಅಧ್ಯಕ್ಷ

ಮೈಸೂರು: ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟ (ಪಿಯುಸಿಎಲ್)ಘಟಕದ ಸರ್ವ ಸದಸ್ಯರ ಸಭೆಯನ್ನು ಇತ್ತೀಚೆಗೆ ಗೋಕುಲಂನ ಶ್ಯಾಗಲೆ ಹೌಸ್‌ನಲ್ಲಿ ಆಯೋಜಿಸಲಾಗಿತ್ತು.

ಮೈಸೂರು ಪಿಯುಸಿಎಲ್ ಘಟಕದ ಅಧ್ಯಕ್ಷ ಕಾಳಚನ್ನೇಗೌಡ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ವಿ.ಪುರುಷೋತ್ತಮ್ ಕಳೆದ 2023ರ ಫೆಬ್ರವರಿಯಿಂದ 2024ರ ಅಕ್ಟೋಬರ್ ಅಂತ್ಯದವರೆಗೆ ಪಿಯುಸಿಎಲ್ ಕಾರ್ಯಕ್ರಮಗಳ ವಿವರ ಮಂಡಿಸಿದರು. ಖಜಾಂಚಿ ಡಾ.ಇ.ರತಿರಾವ್ ಅವರು ಈ ಅವಧಿಯ ಲೆಕ್ಕಪತ್ರ ಮಂಡಿಸಿದರು.

2024ರ ಸಾಲಿನ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಭಾಜನರಾದ ಡಾ.ಇ.ರತಿರಾವ್ ಮತ್ತು ಜಿಲ್ಲಾ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ಸಮತಾ ವೇದಿಕೆಯನ್ನೂ ಅಭಿನಂದಿಸಲಾಯಿತು.

2024-26ರ ಎರಡು ವರ್ಷಗಳ ಅವಧಿಗೆ ಪಿಯುಸಿಎಲ್ ಮೈಸೂರು ಘಟಕದ ಪದಾಧಿಕಾರಿಗಳಾಗಿ ನೇಮಕ ಮಾಡಲಾಯಿತು. ಕಮಲ್ ಗೋಪಿನಾಥ್(ಅಧ್ಯಕ್ಷ), ಪ್ರೊ.ಲತಾ ಕೆ.ಬಿಡ್ಡಪ್ಪ, ಮೊಹಮ್ಮದ್ ಫಯಾಜ್ ಕಲೀಂ(ಉಪಾಧ್ಯಕ್ಷರು), ವಿ.ಪುರುಷೋತ್ತಮ್(ಪ್ರಧಾನ ಕಾರ್ಯದರ್ಶಿ), ಬೂಕನಕೆರೆ ವಿಜೇಂದ್ರ, ಕುಮಾರಸ್ವಾಮಿ ಕೂಡ್ಲಾಪುರ(ಸಹ ಕಾರ್ಯದರ್ಶಿಗಳು), ಡಾ. ಇ.ರತಿರಾವ್(ಖಜಾಂಚಿ), ಮನ್ಸೂರ್ ಅಹಮದ್, ಡಾ.ಬಿ.ಎಲ್.ವೆಂಕಟರಾಮ್, ಪುರುಷೋತ್ತಮ, ಪ್ರೊ.ಪಿ.ಎನ್.ಶ್ರೀದೇವಿ, ಮಹಾಲಿಂಗಪ್ಪ(ಕಾರ್ಯಕಾರಿ ಸಮಿತಿ ಸದಸ್ಯರು) ಅವರು ನಿಯೋಜನೆಗೊಂಡರು.