ಜಿಲ್ಲೆ

ಪಿಯುಸಿ ಫಲಿತಾಂಶ ಪ್ರಕಟ : ಹಾಸನ 12 ರಿಂದ 7ನೇ ಸ್ಥಾನಕ್ಕೆ ಜಿಗಿತ

ಹಾಸನ: ದ್ವಿತೀಯ ಪಿಯುಸಿ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಜಿಲ್ಲೆ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ 7ನೇ ಸ್ಥಾನವನ್ನು ಪಡೆದುಕೊಂಡಿದೆ.

ಕಳೆದ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹಾಸನ 12ನೇ ಸ್ಥಾನವನ್ನು ಪಡೆದುಕೊಂಡಿತ್ತು. ಈ ಬಾರಿ 14,451 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 12,014 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದಿನಂತೆ ಈ ಬಾರಿಯೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಕಲಾ ವಿಭಾಗದಿಂದ ಒಟ್ಟು ಜಿಲ್ಲೆಯಲ್ಲಿ 3458 ವಿದ್ಯಾರ್ಥಿಗಳಲ್ಲಿ 2372 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.68.59 ಫಲಿತಾಂಶ ಬಂದಿದೆ. ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ 5275 ವಿದ್ಯಾರ್ಥಿಗಳಲ್ಲಿ 4445 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 84.27ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ 5718 ವಿದ್ಯಾರ್ಥಿಗಳಲ್ಲಿ 5197 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 90 89ರಷ್ಟು ಫಲಿತಾಂಶ ದಾಖಲಾಗಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಿಂತ ನಗರದ ವಿದ್ಯಾರ್ಥಿಗಳಿಗೆ ಮೇಲುಗೈ ಸಾಧಿಸಿದ್ದಾರೆ 10,894ರಲ್ಲಿ 9117 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಿಂದ 3557 ವಿದ್ಯಾರ್ಥಿಗಳಲ್ಲಿ 2897 ತೇರ್ಗಡೆಯಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ 8927 ವಿದ್ಯಾರ್ಥಿಗಳಲ್ಲಿ 7424, ಆಂಗ್ಲ ಮಾಧ್ಯಮದಲ್ಲಿ 9136 ವಿದ್ಯಾರ್ಥಿಗಳಲ್ಲಿ 6737 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯ ಟಾಪರ್‌ಗಳ ವಿವರ

ಶುಕ್ರವಾರ ಪ್ರಕಟವಾದ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಜಿಲ್ಲೆಯ ಸೆಂಟ್ರಲ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿ ಶ್ರೀನಿಧಿ ಕೆ.ಎನ್. ಎಂಬಾತ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಜಿಲ್ಲೆಗೆ ಟಾಪರ್ರ್ ಅಗಿದ್ದಾನೆ.

ಕಲಾ ವಿಭಾಗದಲ್ಲಿ ಬೇಲೂರು ತಾಲೂಕಿನ ಹಗರೆ ಸರ್ಕಾರಿ ಕಾಲೇಜಿನ ಮೋನಿಕಾ ಎಲ್.ಸಿ. ಎಂಬ ವಿದ್ಯಾರ್ಥಿನಿ 600ಅಂಕಗಳಿಗೆ 575 ಅಂಕ ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.ಅದೇ ರೀತಿ ವಿಜ್ಞಾನ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು 592 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ

ಹಾಸನದ ಮಾಸ್ಟರ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಎನ್.ಜೈನ್, ಎಚ್.ಕೆ.ಎಸ್ ಕಾಲೇಜಿನ ಪ್ರಸ್ತುತ್ ಪಟೇಲ್ ವೈ.ಎಂ. ಬ್ರಿಗೇಡ್ ಕಾಲೇಜಿನ ವಿದ್ಯಾರ್ಥಿ ನವನಿಧಿ ಡಿ.ಜೆ ಇವರು ಜಿಲ್ಲೆಯ ಅತ್ಯಂತ ಶ್ರೇಣಿಯಲ್ಲಿ ಪಾಸ್ ಆಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಶೇ100 ಫಲಿತಾಂಶ ಪಡೆದ ಕಾಲೇಜುಗಳ ವಿವರ

ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎರಡು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಮತ್ತು 10 ಖಾಸಗಿ ಕಾಲೇಜುಗಳು ಶೇ. 100ರಷ್ಟು ಫಲಿತಾಂಶ ಪಡೆದುಕೊಂಡಿದೆ ಎಂದು ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕ ಮಹಾಲಿಂಗಯ್ಯ ತಿಳಿಸಿದರು.

ಸಕಲೇಶಪುರ ತಾಲೂಕಿನ ಯಸಲೂರು ಮತ್ತು ಚಂಗಡಿಹಳ್ಳಿ ಕಾಲೇಜಿನಲ್ಲಿ ಬಹುತೇಕ ಖಾಯಂ ಉಪನ್ಯಾಸಕರು ಇಲ್ಲದೇ ಅತಿಥಿ ಉಪನ್ಯಾಸಕರು ಶ್ರಮದಿಂದ ಶೇ100 ಪಲಿತಾಂಶ ಬಂದಿದೆ ಎಂದು ಹೇಳಿದರು.

ಸಕಲೇಶಪುರದ ಜೆಎಸ್‌ಎಸ್ ಕಾಲೇಜು, ಚನ್ನರಾಯಪಟ್ಟಣದ ಮುರಾರ್ಜಿ ಅಲ್ಪಸಂಖ್ಯಾತರ ಬಾಲಕಿಯರ ಕಾಲೇಜು, ಅರಸೀಕೆರೆಯ ಅನಂತ , ಜ್ಞಾನಶ್ರೀ ಎಕ್ಷಪಟ್ ಕಾಲೇಜು ಮತ್ತು ಹಾಸನದ ಲೋಯೋಲ್ ಕಾಲೇಜು ,ಮಂಗಳ, ಸಗೇಶಿಯಸ್, ಸೆಂಟ್ರಲ್ ಕಾಮರ್ಸ್, ಎಚ್.ಕೆ.ಎಸ್, ಗ್ಲೋಬಲ್ ಟೈಮ್ಸ್ ಪದವಿಪೂರ್ವ ಕಾಲೇಜುಗಳು ಶೇ100 ಪಲಿತಾಂಶ ಪಡೆದಿದೆ.