ಅಶೋಕ ಶೆಟ್ಟರ, ಬಾಗಲಕೋಟೆ: ದ್ವಿತೀಯ ಪಿಯು ಫಲಿತಾಂಶ ಪಟ್ಟಿಯಲ್ಲಿ ಟಾಪ್ ೭ ವರೆಗೂ ಸಾಗಿದ್ದ ಬಾಗಲಕೋಟೆ ಜಿಲ್ಲೆ ಇದೀಗ ಮತ್ತೆ ಇಳಿಮುಖದಲ್ಲಿ ತನ್ನ ಹೆಸರು ದಾಖಲಿಸಲು ಆರಂಭಿಸಿದೆ. ಮಂಗಳವಾರ ಪ್ರಕಟಗೊಂಡ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯ ಸ್ಥಾನ ೧೫ಕ್ಕೆ ಜಾರಿ ಹೋಗಿದೆ. ಅಷ್ಟೇ ಅಲ್ಲದೇ ಸರಾಸರಿ ಫಲಿತಾಂಶದಲ್ಲಿ ತೀವ್ರ ಇಳಿಕೆ ಕಂಡಿದ್ದು ಭರ್ತಿ ಶೇ. ೧೪.೭೧ ರಷ್ಟು ಕಡಿಮೆಯಾಗಿ ಪಾತಾಳಕ್ಕೆ ಕುಸಿದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿಗೆ ಪಿಯು ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಗೆ ಚಾಲ್ತಿ ವರ್ಷದ ಹಾಗೂ ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು ೨೫೮೩೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ೧೭೭೫೦ ಪರೀಕ್ಷಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇದರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳು ೨೪೦೦೪ ಜನರು ಪರೀಕ್ಷೆ ಬರೆದಿದ್ದು, ೧೭೪೮೧ ಜನರು ತೇರ್ಗಡೆ ಆಗಿದ್ದಾರೆ. ಉಳಿದಂತೆ ಪ್ರಸಕ್ತ ವರ್ಷವೂ ಪಿಯು -ಫಲಿತಾಂಶ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಽಸಿದ್ದು, ಒಟ್ಟು ಪರೀಕ್ಷಾರ್ಥಿಗಳ ಪೈಕಿ ಬಾಲಕಿಯರು ಶೇ. ೭೪.೮೦ ಸರಾಸರಿಯಲ್ಲಿ ಪಾಸು ಮಾಡಿದ್ದರೆ ವಿದ್ಯಾರ್ಥಿಗಳು ಶೇ. ೬೧.೩೬ ಸರಾಸರಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಿಂದ ಕಳೆದ ಸಲ ೧೧ ನೇ ಸ್ಥಾನದಲ್ಲಿ ಇದ್ದ ಬಾಗಲಕೋಟೆ ಜಿಲ್ಲೆ ಈ ಸಲ ನಾಲ್ಕು ಸ್ಥಾನ ಕುಸಿತ ಕಂಡಿದೆ.
ಟಾಪ್ ೭ಗೆ ಬಂದಿದ್ದ ಜಿಲ್ಲೆ :
ಶೈಕ್ಷಣಿಕವಾಗಿ ಹಿಂದುಳಿದಿದ್ದ ಜಿಲ್ಲೆಗಳ ಪೈಕಿ ಬಾಗಲಕೋಟೆ ಜಿಲ್ಲೆಯೂ ಒಂದಾಗಿದ್ದು, ಕಳೆದ ಒಂದುವರೆ ದಶಕ್ಕೂ ಮುನ್ನ ಜಿಲ್ಲೆಯ ಹೆಸರನ್ನು ಕೆಳಗಿನಿಂದ ಮೇಲಕ್ಕೆ ನೋಡುವ ಸ್ಥಿತಿಯಲ್ಲಿ ಇರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಫಲಿತಾಂಶ ದಲ್ಲಿ ಸುಧಾರಣೆ ಕಂಡುಕೊಳ್ಳುತ್ತ ಬಂದಿತ್ತು. ವಿಶೇಷವಾಗಿ ೨೦೧೯ ಮತ್ತು ೨೦೨೦ ರಲ್ಲಿ ಟಾಪ್ ೭ ಸ್ಥಾನದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿತ್ತು.ಅದಕ್ಕೂ ಮುನ್ನ ೨೦೧೬ ಮತ್ತು ೨೦೧೭ರಲ್ಲಿ ಟಾಪ್ ೧೦ನಲ್ಲಿ ಕಾಣಿಸಿಕೊಂಡು ಹತ್ತನೇ ಸ್ಥಾನ ಅಲಂಕರಿಸಿತ್ತು. ಕೋವಿಡ್ ಬಳಿಕ ಮತ್ತೆ ಫಲಿತಾಂಶದಲ್ಲಿ ಏರಿಳಿತ ಕಾಣಿಸುತ್ತಿದೆ. ೨೦೨೨ರಲ್ಲಿ ಟಾಪ್ ಟೆನ್ ಗೆ ಬಂದಿದ್ದು, ೨೦೨೩ರಲ್ಲಿ ಮತ್ತೆ ೧೫ನೇ ಸ್ಥಾನಕ್ಕೆ ಕುಸಿದಿತ್ತು. ೨೦೨೪ರಲ್ಲಿ ೧೧ನೇ ಸ್ಥಾನದಲ್ಲಿ ಕಾಣಿಸಿಕೊಂಡು, ಈ ಸಲ ಮತ್ತೆ ೧೫ ಸ್ಥಾನಕ್ಕೆ ಪಲ್ಲಟವಾಗಿದೆ. ಇದರಿಂದ ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಯಥಾಸ್ಥಿತಿ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದೆ.
ವಿಜ್ಞಾನ ವಿಭಾಗದಲ್ಲಿ ಭೂಮಿಕಾ ಮತ್ತು ಕಲಾವತಿ ಜಿಲ್ಲೆಗೆ ಪ್ರಥಮ!
ಪ್ರಸಕ್ತ ವರ್ಷದ ಫಲಿತಾಂಶದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದವರು ಅತಿಹೆಚ್ಚು ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಜಮಖಂಡಿಯ ತುಂಗಳ ಪಿಯು ವಿಜ್ಞಾನ ಕಾಲೇಜಿನ ಭೂಮಿಕಾ ಬಾಗೇವಾಡಿ ಹಾಗೂ ಬಾಗಲಕೋಟೆಯ ವಿಶ್ವಚೇತನ ಕಾಲೇಜಿನ ಕಲಾವತಿ ಸುರಕೋಡ ಅವರು ೬೦೦ಕ್ಕೆ ೫೯೪ ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಇದ್ದಾರೆ. ವಿಜ್ಞಾನ ವಿಭಾಗದಲ್ಲಿ ಜಮಖಂಡಿ ತುಂಗಳ ಕಾಲೇಜಿನ ಗಂಗಪ್ಪ ಉಪ್ಪಾರ ೫೯೩ ಅಂಕಡೆ ಪಡೆದು ದ್ವಿತೀಯ ಸ್ಥಾನ ಪಡೆದಿದ್ದರೆ, ಜಮಖಂಡಿಯ ಸಾಯಿನಿಕೇತನ ಕಾಲೇಜಿನ ವಿಕ್ರಮ ಯರಕಲ್ಲ ೫೯೨ ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯದಲ್ಲಿ ಮಧುಶ್ರೀ ಪ್ರಥಮ :
ಪಿಯು ವಾಣಿಜ್ಯ ವಿಭಾಗದಲ್ಲಿ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಮಲ್ಲಿಕಾರ್ಜುನ ಪಿಯು ಕಾಲೇಜಿನ ಮಧುಶ್ರೀ ಶೆಟ್ಟೆನ್ನವರ ೫೯೩ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ೫೮೭ ಅಂಕ ಪಡೆದಿರುವ ಕೆರೂರ ಎಂಎಚ್‌ಎA ಪಿಯು ಕಾಲೇಜಿನ ಸುಕನ್ಯಾ ಇಂಡಿ ದ್ವಿತೀಯ ಸ್ಥಾನದಲ್ಲಿ ಇದ್ದರೆ ತೃತೀಯ ಸ್ಥಾನದಲ್ಲಿ ೫೮೫ ಅಂಕ ಪಡೆದಿರುವ ಜಿಲ್ಲೆಯ ನಾಲ್ಕವರು ಇದ್ದಾರೆ. ಮುಧೋಳ ಸಾಯಿನಿಕೇತನ ಪಿಯು ಕಾಲೇಜಿನ ಅಶ್ವಿನಿ ಗುರಡ್ಡಿ, ಇಳಕಲ್ಲನ ಶ್ರೀ ಚೈತನ್ಯ ಕಾಲೇಜಿನ ಭೀಮಸಾಲ ರಾಜಪುರೋಹಿತ, ತೊದಲಬಾಗಿ ಗ್ರಾಮದ ಪ್ರೀತಿ ಶೆಟ್ಟೆನ್ನವರ ಹಾಗೂ ಗಲಗಲಿ ಗ್ರಾಮದ ನ್ಯೂವ್ ಇಂಗ್ಲಿಷ್ ಪಿಯು ಕಾಲೇಜಿನ ಸೌಭಾಗ್ಯ ಮೇತ್ರಿ ಅವರು ತೃತೀಯ ಸ್ಥಾನವನ್ನು ಹಂಚಿಕೊAಡಿದ್ದಾರೆ.
ಇನ್ನು ಕಲಾ ವಿಭಾಗದಲ್ಲಿ ಜಿಲ್ಲೆಯ ಇಬ್ಬರು ಸಮಾನ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಹಂಚಿಕೊAಡಿದ್ದಾರೆ. ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಅನ್ನದಾನೀಶ್ವರ ಪಿಯು ಕಾಲೇಜಿನ ಅರುಂಧತಿ ಕಬ್ಬರಗಿ ಹಾಗೂ ಜಮಖಂಡಿ ತಾಲೂಕಿನ ಗೋಠೆ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ವಿಜಯಲಕ್ಷಿ÷್ಮÃ ಬಡಿಗೇರ ಅವರು ತಲಾ ೫೮೧ ಅಂಕ ಪಡೆದುಕೊಂಡಿದ್ದಾರೆ.
೫೭೯ ಅಂಕ ಪಡೆದಿರುವ ಲೋಕಾಪುರ ಬಸವೇಶ್ವರ ಮಹಿಳಾ ಕಾಲೇಜಿನ ಕೀರ್ತಿ ಪಾಟೀಲ ಮತ್ತು ಜಮಖಂಡಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಸ್ವಾತಿ ಕಾಂಬಳೆ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾಗೆಯೇ ತೃತೀಯ ಸ್ಥಾನದಲ್ಲಿ ತಲಾ ೫೭೮ ಅಂಕ ಪಡೆದಿರುವ ಜಮಖಂಡಿ ಬಿಎಚ್‌ಎಸ್ ಕಲಾ ಕಾಲೇಜಿನ ಗಿರಿಜಾ ತೇಲಿ ಹಾಗೂ ಬನಹಟ್ಟಿಯ ಎಸ್‌ಆರ್‌ಎ ಕಾಲೇಜಿನ ಪ್ರೀತಿ ಈಳಗೇರ ಅವರು ಇದ್ದಾರೆ.