ಜಿಲ್ಲೆ

ಪಿಡಿಒ ಪರೀಕ್ಷೆ ಅಕ್ರಮ ಎಸಗಿದವನ ಬಂಧನ

ತುಮಕೂರು: ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಬೆಂಗಳೂರಿನ ಧಮೇರ್ಂದ್ರ(33) ಎಂಬ ಅಭ್ಯರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ವಿದ್ಯೋದಯ ಕಾಲೇಜು ಪರೀಾ ಕೇಂದ್ರದಲ್ಲಿ ಪರೀೆಗೆ ಹಾಜರಾಗಿದ್ದ ಧಮೇರ್ಂದ್ರ ಎಲೆಕ್ಟ್ರಾನಿಕ್​ ಡಿವೈಸ್​ ಬಳಸಿಕೊಂಡು ಅಕ್ರಮ ಎಸಗುತ್ತಿದ್ದ ಎನ್ನಲಾಗಿದೆ. ತಿಲಕ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.