ಕವಿತಾಳ: ಸಮೀಪದ ಪಾಮನಕಲ್ಲೂರುನಲ್ಲಿ ಪಿಡಿಒ ರಾಮಣ್ಣ ನಡಗಿ ನಿರ್ಲಕ್ಷದಿಂದ ಗೃಹಲಕ್ಷ್ಮೀ ಯೋಜನೆ ಗೊಂದಲದ ಗೂಡಾಯಿತು.
ಮೈಸೂರಿನಲ್ಲಿ ಅದ್ದೂರಿಯಾಗಿ ಆಯೋಜಸಿದ್ದ ಗೃಹಲಕ್ಷ್ಮೀಯೋಜನೆ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಪಂಚಾಯಿತಿಗೆ ಆಗಮಿಸಿದ ಮಹಿಳೆಯರಿಗೆ ನಿರಾಸೆ ಮೂಡಿತು
. ಕಾರ್ಯಕ್ರಮಕ್ಕೂ ಮುಂಚೆ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರು ಪಂಚಾಯಿತಿ ಕಚೇರಿಗೆ ಆಗಮಿಸಿದ್ದರು. ಆದರೆ ಪಂಚಾಯಿತಿಯಲ್ಲಿ ಕುರ್ಚಿ ವ್ಯವಸ್ಥೆ ಮಾಡಿರಲಿಲ್ಲ. ಕುಳಿತುಕೊಳ್ಳಲು ಸ್ಥಳವೂ ಇರಲಿಲ್ಲ.
ಕಾರ್ಯಕ್ರಮಕ್ಕೆ ಬಂದವರಿಗೆ ನಾವು ಇಷ್ಟು ಜನಕ್ಕೆ ಕಾರ್ಯಕ್ರಮಕ್ಕೆ ಕರೆದಿರಲಿಲ್ಲ ಎಂದು ಪಿಡಿಒ ಬೇಜವಾಬ್ದಾರಿತನದಿಂದ ಮಾತನಾಡಿದರು ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಸಿಬ್ಬಂದಿ ಸಮಸ್ಯೆಯಿಂದ ಕಾರ್ಯಕ್ರಮದ ವ್ಯವಸ್ಥೆ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು
ಪಿಡಿಒ ತಿಳಿಸಿದರು.