ಜಿಲ್ಲೆ

ಪಿಡಿಎದಲ್ಲಿ ಆನ್ಲೈನ್ ಅಲ್ಪಾವಧಿ ತರಬೇತಿ

ಕಲಬುರಗಿ: ಹವಾಮಾನ ವೈಪರಿತ್ಯ ಮತ್ತು ಜಾಗತಿಕ ತಾಪಮಾನದಲ್ಲಿ ಉಂಟಾಗುತ್ತಿರುವ ಏರುಪೇರಿಗೆ ಮೂಲ ಕಾರಣವಾಗಿರುವ ವಾಹನ ಮಾಲಿನ್ಯ ತಡೆಗಟ್ಟಲು ಹೈಬ್ರಿಡ್ ಮತ್ತು ವಿದ್ಯುತ್ ಚಾಲಿತ ವಾಹನಗಳು ಸಹಕಾರಿ ಆಗಲಿವೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅಭಿಪ್ರಾಯಪಟ್ಟರು.
ಪಿಡಿಎ ಕಾಲೇಜಿನಲ್ಲಿ ಆಟೋಮೊಬೈಲ್ ವಿಭಾಗ ಮಂಗಳವಾರ ಏರ್ಪಡಿಸಿದ್ದ ಎಐಸಿಟಿ ಪ್ರಾಯೋಜಿಸಿದ ಹೈಬ್ರಿಡ್ ಮತ್ತು ಇಲೆಕ್ಟ್ರಿಕಲ್ ವೆಹಿಕಲ್ ಕುರಿತ ಅಲ್ಪಾವಧಿ ತರಬೇತಿಗೆ ಆನ್ಲೈನ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಜನರು ಜಾಗೃತರಾಗಿ ವಾಯು ಮಾಲಿನ್ಯಕ್ಕೆ ಎಡೆಮಾಡಿಕೊಡುವ ವಾಹನ ಬಳಸುವುದನ್ನು ಕಡಿಮೆ ಮಾಡಬೇಕು. ಈಗಾಗಲೇ ಸಾಕಷ್ಟು ಕಂಪನಿಗಳು ಇಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇನ್ನಷ್ಟು ಸಂಶೋಧನೆ ನಡೆಯುತ್ತಿದೆ ಎಂದರು.
ಪ್ರಾಚಾರ್ಯ ಡಾ.ಎಸ್.ಎಸ್. ಹೆಬ್ಬಾಳ ಮಾತನಾಡಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಕಾಲೇಜು ಶ್ರಮಿಸುತ್ತಿದೆ. ಶಿಕ್ಷಕರು ಈ ಅಲ್ಪಾವಧಿ ತರಬೇತಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಚಾಲಕ ಡಾ.ಎಸ್.ಆರ್. ಹೊಟ್ಟಿ ಅವರು ಹೈಬ್ರಿಡ್ ಮತ್ತು ಇಲೆಕ್ಟ್ರಿಕಲ್ ವೆಹಿಕಲ್ ಕುರಿತು ಮಾಹಿತಿ ನೀಡಿದರು. ದಿಲ್ಲಿಯ ಐಐಟಿ ಎನರ್ಜಿ ಸ್ಟಡೀಸ್ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಎ. ಸುಬ್ರಹ್ಮಣ್ಯಂ, ಹೈದರಾಬಾದ್ನ ಎಕ್ಸಾಮ್ ಎನರ್ಜಿ ಕನ್ಸವರ್ ಶನ್ ವ್ಯವಸ್ಥಾಪಕ ನಿರ್ದೇಶಕ ಎಂ.ಜೆ. ಪುರೋಹಿತ, ಉಪ ಪ್ರಾಚಾರ್ಯ ಡಾ.ಎಸ್.ಎಸ್. ಕಲಶೆಟ್ಟಿ, ಡೀನ್ ಅಕಾಡೆಮಿಕ್ ಡಾ.ಎಸ್.ಆರ್. ಪಾಟೀಲ್, ಪರೀಕ್ಷಾ ಕೇಂದ್ರದ ನಿವರ್ಾಹಕ ಪ್ರೊ.ರವೀಂದ್ರ ಲಠ್ಠೆ, ಹೆಚ್ಚುವರಿ ಡೀನ್ ಡಾ.ವಿಶ್ವನಾಥ ಬುರಕಪಳ್ಳಿ, ಪ್ರೊ.ಎಸ್.ಸಿ. ಹಿರೇಮಠ, ಪ್ರೊ.ಎಂ.ಎಸ್. ಅಲ್ಲದ, ಪ್ರೊ.ಶಿವಕುಮಾರ ಪಾಟೀಲ್, ಪ್ರೊ.ಎಸ್.ವಿ. ಗುಬ್ಬೆವಾಡ ಉಪಸ್ಥಿತರಿದ್ದರು.
ಆಟೋಮೊಬೈಲ್ ವಿಭಾಗದ ಮುಖ್ಯಸ್ಥ ಡಾ.ಚೆನ್ನಪ್ಪ ಬಿರಾದಾರ ವಂದಿಸಿದರು. ಸಹ ಪ್ರಾಧ್ಯಾಪಕ ಶಿವಕುಮಾರ ಪಾಟೀಲ್ ನಿರೂಪಣೆ ಮಾಡಿದರು. ದೇಶದ ವಿವಿಧ ರಾಜ್ಯಗಳ 90 ಶಿಕ್ಷಕರು ಭಾಗವಹಿಸಿದ್ದರು.