ಚಿಕ್ಕೋಡಿ: ದೇಶಕ್ಕೆ ಅನ್ನ ಹಾಕುವ ರೈತರ ದೇವಾಲಯಗಳಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರಾಜಕೀಯ ಬೇಡ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ತಾಲೂಕಿನ ಮುಗಳಿ ಗ್ರಾಮದ ಜೈ ಹನುಮಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 240 ಸದಸ್ಯರ ಪೈಕಿ 170 ರೈತ ಸದಸ್ಯರಿಗೆ 1.48 ಕೋಟಿ ಸಾಲ ಹಾಗೂ ಪತ್ತು ವಿತರಣೆ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ರೈತರ ಆರ್ಥಿಕ ಮಟ್ಟ ಸುಧಾರಿಸಲು ಬಿಡಿಸಿಸಿ ಬ್ಯಾಂಕ್ ಪಾತ್ರ ಮುಖ್ಯವಾಗಿದೆ. ಸಾಲ ಮರುಪಾವತಿ ಮಾಡಿ ಸಂಸ್ಥೆ ಉಳಿವಿಗೆ ಪ್ರಯತ್ನಿಸಿ ಎಂದರು.
ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ ಮಾತನಾಡಿ, ಗ್ರಾಮದಲ್ಲಿ ಕೃಷಿ ಪತ್ತಿನ ಸಂಘ ಇದ್ದರೆ ರೈತರು ಆರ್ಥಿಕವಾಗಿ ಸದೃಢವಾಗುತ್ತಾರೆ. ಕರೋಶಿ, ಜೈನಾಪುರ, ಮುಗಳಿ, ಹತ್ತರವಾಟ ಮುಂತಾದ ಕಡೆಗಳಲ್ಲಿ ರಮೇಶ ಕತ್ತಿಯವರು ಸೊಸೈಟಿ ಮಂಜೂರು ಮಾಡಿದ್ದಾರೆ. ಬಡ್ಡಿ ರಹಿತ ಸಾಲ ಕೊಡುವುದು ರೈತರಿಗೆ ಅನುಕೂಲವಾಗಿದೆ ಎಂದರು.
ರಾಜು ಹರಗನ್ನವರ ಮಾತನಾಡಿ, ಇದೀಗ ರೈತರಿಗೆ 1.48 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಇದು ರೈತರಿಗೆ ಅನುಕೂಲವಾಗಲಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಸಂಜು ಬಡಿಗೇರ, ರಾಜು ಹರಗನ್ನವರ, ಹಿರಾ ಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಬಸವರಾಜ ಕಡಟ್ಟಿ, ರಮೇಶ ಪಾಟೀಲ, ರಾವಸಾಹೇಬ ಪಾಟೀಲ, ವಿಲಾಸ
ಪೊಲೀಸ್ ಪಾಟೀಲ, ಮಲ್ಲಗೌಡ ಪಾಟೀಲ, ಬಾಬಾಜಿ ಪಾಟೀಲ, ಜೈ ಹನುಮಾನ ಪಿಕೆಪಿಎಸ್ ಅಧ್ಯಕ್ಷ ಈರಗೌಡ ಪಾಟೀಲ ಇತರರು ಇದ್ದರು.