ಜಿಲ್ಲೆ

ಪಿಎಸ್‌ಐ ಮನೆಯಲ್ಲಿ ಕುರಿ ಕಳವು

ತರೀಕೆರೆ: ಮೈಸೂರಿನಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ತರಬೇತಿಯಲ್ಲಿರುವ ತಾಲೂಕಿನ ಪಿರಮೇನಹಳ್ಳಿ ಪಿ.ಎಸ್.ಕುಮಾರಸ್ವಾಮಿ ಎಂಬುವವರ ಮನೆಯಲ್ಲಿ ಸಾಕಿದ್ದ ನಾಲ್ಕು ಕುರಿಗಳನ್ನು ಕದ್ದೊಯ್ಯಲಾಗಿದೆ.

ಶನಿವಾರ ಬೆಳಗಿನಜಾವ ಪಿಎಸ್‌ಐ ಪಿ.ಎಸ್.ಕುಮಾರಸ್ವಾಮಿ ಎಂಬುವವರ ಮನೆ ಹಿಂಭಾಗದ ಕೊಟ್ಟಿಗೆ ಬಾಗಿಲಿನ ಚೌಕಟ್ಟು ಕಿತ್ತು ಹಾಕಿ, ಬೀಗ ಮುರಿದು ನುಗ್ಗಿರುವ ಕಳ್ಳರು ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ನಾಲ್ಕು ಕುರಿಗಳನ್ನು ಕದ್ದೊಯ್ದಿದ್ದಾರೆ. ಬೆಳಗ್ಗೆ ಕೊಟ್ಟಿಗೆಯಲ್ಲಿ ಕುರಿಗಳು ನಾಪತ್ತೆಯಾಗಿರುವುದನ್ನು ಕಂಡ ಮನೆಯವರು ಗ್ರಾಮದ ವಿವಿಧ ಕಡೆ ಹುಡುಕಿದರು. ಕುರಿಗಳು ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪಿಎಸ್‌ಐ ಪಿ.ಎಸ್.ಕುಮಾರಸ್ವಾಮಿ ಅವರ ಸಹೋದರ ಕೃಷ್ಣಮೂರ್ತಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.