ಪಿರಿಯಾಪಟ್ಟಣ: ತಾಲೂಕಿನ ಹಿಟ್ನೆಹೆಬ್ಬಾಗಿಲು ಪಿಎಸಿಸಿಎಸ್ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿಗ ಮುತ್ತೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಚ್.ಎಸ್.ಕುಮಾರ್ ಅವರು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮುತ್ತೇಗೌಡ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಿಡಿಒ ಪ್ರಸಾದ್ ಅವರು ಅವಿರೋಧ ಆಯ್ಕೆ ಘೋಷಿಸಿದರು. ಬಳಿಕ ಆಡಳಿತ ಮಂಡಳಿ ಹಾಗೂ ಜೆಡಿಎಸ್ ಬೆಂಬಲಿಗರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಸಂಘದ ಉಪಾಧ್ಯಕ್ಷ ಡಿ.ಮಹದೇವ್, ನಿರ್ದೇಶಕರಾದ ಎಚ್.ಈ ಶಂಕರ್, ಎಚ್.ಸಿ.ಜ್ಯೋತಿ, ಕೆ.ಕೆ.ಹರೀಶ್, ಎಚ್.ಎಂ.ವಿನೋದ್ ಕುಮಾರ್, ಎಚ್.ಪಿ.ಅನಿಲ್ ಕುಮಾರ್, ಎಚ್.ಎಸ್ ರವಿ, ಗಾಯತ್ರಿ, ರಾಮನಾಯಕ, ನಾಗೇಂದ್ರ, ಬ್ಯಾಂಕ್ ಪ್ರತಿನಿಧಿ ಎಚ್.ಕೆ. ಜಗದೀಶ್, ಸಿಇಒ ಕೆ.ಪಿ.ಜಯರಾಮ್, ಗುಮಾಸ್ತರಾದ ಎಚ್.ಕೆ.ನಟರಾಜು, ಸಂತೋಷ್, ಶ್ರೀನಿವಾಸ್ ಇತರರು ಇದ್ದರು.