ಜಿಲ್ಲೆ

ಪಿಎಲ್‌ಡಿ ಬ್ಯಾಂಕ್ ಎಲೆಕ್ಷನ್ ಕಾವು

ಚಾಮರಾಜನಗರ: ಚಾಮರಾಜನಗರದಲ್ಲಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಆಡಳಿತ ಮಂಡಳಿಯ ಚುನಾವಣೆ ಕಾವೇರಿದೆ.

ಮುಂದಿನ 5 ವರ್ಷಗಳವರೆಗೆ ಅಧಿಕಾರದಲ್ಲಿರುವ ಆಡಳಿತ ಮಂಡಳಿಯು ಒಟ್ಟು 15 ಜನ ನಿರ್ದೇಶಕರನ್ನು ಹೊಂದಿದೆ. ಈ ಪೈಕಿ ಚುನಾಯಿಸಬೇಕಾದ ಸ್ಥಾನಗಳ ಸಂಖ್ಯೆ ಒಟ್ಟು 14. ಸಾಲಗಾರರ ಕ್ಷೇತ್ರದಿಂದ 13 ಸ್ಥಾನ, ಸಾಲಗಾರರಲ್ಲದ ಕ್ಷೇತ್ರದಿಂದ 1 ಸ್ಥಾನದ ಆಯ್ಕೆಗೆ ಚುನಾವಣೆ ೋಷಣೆಯಾಗಿದೆ.

ಈ ಸಂಬಂಧ ಜ.22ರಂದು ಅರ್ಹ ಮತದಾರರ ಪಟ್ಟಿ ಮತ್ತು ಸುಸ್ತಿದಾರರ ಪಟ್ಟಿ ಪ್ರಕಟಣೆ ಮಾಡಲಾಗಿದೆ. ೆ.1ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ೆ.2ರಂದು ರಿಟರ್ನಿಂಗ್ ಅಧಿಕಾರಿಯಿಂದ ನಾಮಪತ್ರ ಪರಿಶೀಲನೆ ನಡೆಯಿತು. ೆ.3ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುವುದು, ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದು ಮತ್ತು ಚಿಹ್ನೆ ಹಂಚಿಕೆ, ಮಾದರಿ ಮತ ಪತ್ರ ಪ್ರಕಟಣೆಯಾಗಿದೆ.ೆ.9ರಂದು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಇದೇ ದಿನ ಲಿತಾಂಶ ೋಷಣೆಯಾಗಲಿದೆ.

ಚುನಾವಣೆ ಕ್ಷೇತ್ರಗಳ್ಯಾವುವು?: ಹರದನಹಳ್ಳಿ ಸಾಲಗಾರರ ಸಾಮಾನ್ಯ ಕ್ಷೇತ್ರ, ಹರವೆ ಸಾಲಗಾರರ ಸಾಮಾನ್ಯ ಕ್ಷೇತ್ರ, ಕುದೇರು ಸಾಲಗಾರರ ಸಾಮಾನ್ಯ ಕ್ಷೇತ್ರ, ಉಡಿಗಾಲ ಸಾಲಗಾರರ ಸಾಮಾನ್ಯ ಕ್ಷೇತ್ರ, ಅರಕಲವಾಡಿ ಸಾಲಗಾರರ ಸಾಮಾನ್ಯ ಕ್ಷೇತ್ರ, ಚಂದಕವಾಡಿ ಸಾಲಗಾರರ ಸಾಮಾನ್ಯ ಕ್ಷೇತ್ರ, ಬದನಗುಪ್ಪೆ ಸಾಲಗಾರರ ಸಾಮಾನ್ಯ ಕ್ಷೇತ್ರ, ಶಿವಪುರ ಸಾಲಗಾರರ ಹಿಂದುಳಿದ ಪ್ರವರ್ಗ ‘ಎ’ ಮೀಸಲು ಕ್ಷೇತ್ರ, ಮಲೆಯೂರು ಸಾಲಗಾರರ ಹಿಂದುಳಿದ ಪ್ರವರ್ಗ ‘ಬಿ’ ಮೀಸಲು ಕ್ಷೇತ್ರ, ಕೊತ್ತಲವಾಡಿ ಸಾಲಗಾರರ ಮಹಿಳಾ ಮೀಸಲು ಕ್ಷೇತ್ರ, ಸಂತೇಮರಹಳ್ಳಿ ಸಾಲಗಾರರ ಮಹಿಳಾ ಮೀಸಲು ಕ್ಷೇತ್ರ, ಅಟ್ಟುಗೂಳಿಪುರ ಸಾಲಗಾರರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ, ಚಾಮರಾಜನಗರ ಟೌನ್ ಸಾಲಗಾರರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ, ಚಾಮರಾಜನಗರ ತಾಲೂಕಿನ ಸಾಲ ಪಡೆಯದೆ ಇರುವ ಸದಸ್ಯರ ಕ್ಷೇತ್ರಗಳಿವೆ. ಕ್ಷೇತ್ರವಾರು ಮತದಾರರು ಮತದಾನ ಮಾಡುವ ಹಕ್ಕನ್ನು ಹೊಂದಿದ್ದಾರೆ.

7 ಸದಸ್ಯರ ಅವಿರೋಧ ಆಯ್ಕೆ:

ನಾಮಪತ್ರ ವಾಪಸ್ ಪಡೆಯುವ ದಿನವಾಗಿದ್ದ ಸೋಮವಾರ 7 ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಯಿತು. ಹರದನಹಳ್ಳಿ, ಉಡಿಗಾಲ, ಚಂದಕವಾಡಿ, ಶಿವಪುರ, ಮಲೆಯೂರು, ಸಂತೇಮರಹಳ್ಳಿ, ಚಾಮರಾಜನಗರ ಟೌನ್ ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಯಿತು. ಇದರಲ್ಲಿ ಹರದನಹಳ್ಳಿ ಕ್ಷೇತ್ರದಿಂದ ಎಚ್.ಎಂ.ಬಸವಣ್ಣ, ಉಡಿಗಾಲ ಕ್ಷೇತ್ರದಿಂದ ಶ್ರೀಕಂಠಪ್ರಸಾದ್,

ಚಂದಕವಾಡಿ ಕ್ಷೇತ್ರದಿಂದ ಮಹದೇವಪ್ಪ, ಸಂತೇಮರಹಳ್ಳಿ ಕ್ಷೇತ್ರದಿಂದ ಜ್ಯೋತಿ, ಚಾಮರಾಜನಗರ ಟೌನ್ ಕ್ಷೇತ್ರದಿಂದ ಮಹದೇವನಾಯಕ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದವರಿಂದ ಅವರ ಆಯ್ಕೆಯನ್ನು ೋಷಣೆ ಮಾಡಲಾಯಿತು. ಉಳಿದ ಎರಡು ಕ್ಷೇತ್ರಗಳಾದ ಶಿವಪುರ ಕ್ಷೇತ್ರದಿಂದ ರಾಜು ಮತ್ತು ನಿಂಗೇಗೌಡ, ಮಲೆಯೂರು ಕ್ಷೇತ್ರದಿಂದ ಅಶೋಕ ಮತ್ತು ರೇವಣ್ಣ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ ರಾಜು ಮತ್ತು ಅಶೋಕ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ನಿಂಗೇಗೌಡ ಮತ್ತು ರೇವಣ್ಣ ಅವಿರೋಧ ಆಯ್ಕೆಯಾದರು.

ಕಣದಲ್ಲಿ ಉಳಿದವರು:

ಕೊತ್ತಲವಾಡಿ ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಮಾದಲಾಂಬಿಕಾ, ಸರ್ವಮಂಗಳಮ್ಮ, ಹರವೆ ಕ್ಷೇತ್ರದಿಂದ ನಂದೀಶ, ಎಸ್.ಸಿ.ಬಸವರಾಜು, ಅಟ್ಟುಗೂಳಿಪುರ ಕ್ಷೇತ್ರದಿಂದ ಕೃಷ್ಣನಾಯ್ಕ, ಜಿ.ಪ್ರವೀಣ್‌ನಾಯ್ಕ, ಕುದೇರು ಕ್ಷೇತ್ರದಿಂದ ಎಸ್.ಜಗದೀಶ್, ಎ.ದೊರೆಸ್ವಾಮಿ, ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ವಿ.ಗುರುಪ್ರಸಾದ್, ಬಿ.ಎಸ್.ಶಂಕರಮೂರ್ತಿ, ಬದನಗುಪ್ಪೆ ಕ್ಷೇತ್ರದ ಎಂ.ಬಸವರಾಜು, ಬಸುಮರಿ, ಅರಕಲವಾಡಿಯಲ್ಲಿ ಬಿ.ಎಸ್.ಅನಿಲ್, ಎಂ.ರವಿ, ಎಂ.ಶಿವಕುಮಾರ್ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.

ಅರಕಲವಾಡಿಯಲ್ಲಿ ತ್ರಿಕೋನ ಸ್ಪರ್ಧೆ:

ಚುನಾವಣೆ ನಡೆಯಲಿರುವ 7 ಕ್ಷೇತ್ರಗಳಲ್ಲಿ 6ರಲ್ಲಿ ಇಬ್ಬರ ನಡುವೆ ನೇರಾನೇರ ಸ್ಪರ್ಧೆ ಇದ್ದರೆ, ಅರಕಲವಾಡಿ ಕ್ಷೇತ್ರದಲ್ಲಿ ಮಾತ್ರ ಮೂವರು ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಬಿ.ಎಸ್.ಅನಿಲ್, ಎಂ.ರವಿ, ಎಂ.ಶಿವಕುಮಾರ್ ಸ್ಪರ್ಧೆ ಮಾಡಿದ್ದಾರೆ.

5ಜನರಿಂದ ನಾಮಪತ್ರ ವಾಪಸ್:

ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ ಒಟ್ಟು 5 ಜನರು ಉಮೇದುವಾರಿಕೆಯನ್ನು ಹಿಂಪಡೆದರು. ಮಲೆಯೂರು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಬಿ.ಅಶೋಕ, ಬದನಗುಪ್ಪೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಎಂ.ಮಹಾದೇವಪ್ಪ, ಕೆ.ಎಂ.ರೂಪೇಶ, ಕುದೇರು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಎಸ್.ರೇವಣ್ಣ, ಶಿವಪುರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಎಸ್.ರಾಜು ಉಮೇದುವಾರಿಕೆ ವಾಪಸ್ ಪಡೆದುಕೊಂಡರು.

ಬಾಲರಾಜುಗೆ ಸನ್ಮಾನ:

ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ಶಿವಪುರ ಕ್ಷೇತ್ರದ ನಿಂಗೇಗೌಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್.ಬಾಲರಾಜು ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಸನ್ಮಾನಿಸಿದರು. ಅವಿರೋಧ ಆಯ್ಕೆಗೆ ಸಹಕಾರ ನೀಡಿದ್ದಕ್ಕೆ ಧನ್ಯವಾದ ತಿಳಿಸಿದರು. ಈ ವೇಳೆ ಎಚ್.ಎಂ.ಬಸವಣ್ಣ, ದೊರೆಸ್ವಾಮಿ, ಮಹದೇವಪ್ಪ ಕುಮಾರ್ ಇದ್ದರು.