ಜಿಲ್ಲೆ

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ

ರಾಜಣ್ಣ

 ಕೆ.ಆರ್.ಪೇಟೆ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ ಹಾಗೂ ಉಪಾಧ್ಯಕ್ಷರಾಗಿ ಹೊಳೆ ಮಾರ್ಗೋನಹಳ್ಳಿ ಸಿಮೆಂಟ್ ಮಂಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸರ್ಕಾರದ ನಾಮ ನಿರ್ದೇಶಕ ಸೇರಿ 15 ಮಂದಿ ನಿರ್ದೇಶಕರ ಬಲ ಹೊಂದಿರುವ ಪಿಎಲ್‌ಡಿ ಬ್ಯಾಂಕ್ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಗಳಿಗೆ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನ ಬಯಸಿ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, ಉಪಾಧ್ಯಕ್ಷ ಸ್ಥಾನ ಬಯಸಿ ಹೊಳೆ ಮಾರ್ಗೋನಹಳ್ಳಿ ರಮೇಶ್ (ಸಿಮೆಂಟ್ ಮಂಜು) ಸಲ್ಲಿಸಿದರು. ನಂತರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ ಹಾಗೂ ಉಪಾಧ್ಯಕ್ಷರಾಗಿ ಹೊಳೆ ಮಾರ್ಗೋನಹಳ್ಳಿ ರಮೇಶ್ (ಸಿಮೆಂಟ್ ಮಂಜು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಸಹ ಚುನಾವಣಾಧಿಕಾರಿಯಾಗಿ ಬ್ಯಾಂಕ್ ಕಾರ್ಯದರ್ಶಿ ರವಿಕುಮಾರ್ ಕಾರ್ಯ ನಿರ್ವಹಿಸಿದರು. ಕಾಂಗ್ರೆಸ್ ಬೆಂಬಲಿಗರು ಪಿಎಲ್‌ಡಿ ಬ್ಯಾಂಕ್ ಆಧಿಕಾರ ಹಿಡಿಯುತ್ತಿದ್ದಂತೆ ಅವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಸಂಭ್ರಮಿಸಿದರು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅಭಿನಂದಿಸಿದರು.

ಮಾಜಿ ಶಾಸಕ ಕೆ.ಬಿ.ಚಂದ್ರುಶೇಖರ್, ಕಾಂಗ್ರೆಸ್ ಮುಖಂಡರಾದ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್ ದೇವರಾಜು, ಕಿಕ್ಕೇರಿ ಸುರೇಶ್, ಕೋಡಿಮಾರನಹಳ್ಳಿ ದೇವರಾಜು, ತಾಪಂ ಮಾಜಿ ಸದಸ್ಯ ಗುಡ್ಡೆಹೊಸಹಳ್ಳಿ ಜವರಾಯಿಗೌಡ, ತಾಲೂಕು ಆರಾಧನಾ ಕಮಿಟಿ ಸದಸ್ಯ ಪ್ರೀತಮ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಕೆ.ಟಿ.ಚಕ್ರಪಾಣಿ, ಮಾಳಗೂರು ಜಗದೀಶ್, ಅಣ್ಣೇಚಾಕನಹಳ್ಳಿ ನಾಗರಾಜು, ಅರೆಬೊಪ್ಪನಹಳ್ಳಿ ಸುನಿಲ್, ಅರಳಕುಪ್ಪೆ ಮೋಹನ್, ಬಣ್ಣೇನಹಳ್ಳಿ ಧನಂಜಯ್,ಶೀಳನೆರೆ ರಾಮೇಗೌಡ, ರಾಜನಾಯಕ್, ಹೊನ್ನೇನಹಳ್ಳಿ ಮಂಜುಳಾ ಕೃಷ್ಣೇಗೌಡ, ನಾಟನಹಳ್ಳಿ ಕವಿತಾ, ಲಕ್ಷ್ಮೀಪುರ ಚಂದ್ರೇಗೌಡ, ಭಾರತಿಪುರ ಸುರೇಶ್, ಬಂಡಿಹೊಳೆ ನಾಗೇಶ್, ಮಾಜಿ ಅಧ್ಯಕ್ಷ ಬಂಡಿಹೊಳೆ ಶಿವಕುಮಾರ್, ಚೇತನ್ ನಾಗರಾಜ್, ಸುರೇಶ್, ಕಿಕ್ಕೇರಿ ಹರೀಶ್, ನೂರಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.