ಹುಬ್ಬಳ್ಳಿ: ಧಾರವಾಡದ ಚೈತನ್ಯ ಅಕ್ಕಣ್ಣವರ ಅವರು ಸ್ಟ್ರಕ್ಚರಲ್ ಫೈರ್ ಇಂಜನಿಯರಿಂಗ್ ವಿಷಯ ಕುರಿತು ಮಂಡಿಸಿದ್ದ ಮಹಾಪ್ರಬಂಧಕ್ಕೆ ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ-ಕರ್ನಾಟಕ) ಪಿಎಚ್. ಡಿ. ಪದವಿ ಪ್ರದಾನ ಮಾಡಿದೆ.
ಡಾ. ಪ್ರಶಾಂತ ಎಂ.ಎಚ್. ಮಾರ್ಗದರ್ಶಕರಾಗಿದ್ದರು. ಚೈತನ್ಯ ಅವರು ಹುಬ್ಬಳ್ಳಿಯ ಬಿವಿಬಿ ಇಂಜನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.