ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ಪಿಎಂಶ್ರೀ ಸರ್ಕಾರಿ ಶಾಲೆಯ ಮಕ್ಕಳು ನಾಟಿ ಮಾಡಿ ಸಂಭ್ರಮಿಸಿದರು.  
ಜಿಲ್ಲೆ

ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳಿಂದ ಕೃಷಿ ನಾಟಿ

ಹೊಸನಗರ: ಶಾಲಾ ಮಕ್ಕಳಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲಿನಬೆಸಿಗೆ ವತಿಯಿಂದ ಗುರುವಾರ ಒಂದು ದಿನದ ಕ್ಷೇತ್ರ ಭೇಟಿ ನಡೆಸಲಾಯಿತು.

ಘನಶೀಲಾ, ಕುಮಾರ ಗೌಡ, ಮಂಜಪ್ಪ ಗೌಡರ ಕೃಷಿ ಗದ್ದೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ಕೃಷಿ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಗದ್ದೆಗೆ ಇಳಿದು ಭತ್ತದ ಸಸಿ ನೆಡುವ ಮೂಲಕ ಒಂದು ದಿನಮಟ್ಟಿಗೆ ರೈತರಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿ ಸಂಭ್ರಮಿಸಿದರು. ಭತ್ತದ ಸಸಿ ಕೀಳುವುದರಿಂದ ಹಿಡಿದು ಮಣ್ಣನ್ನು ಹದಗೊಳಿಸಿ ಸಸಿ ನೆಡುವ ಮೂಲಕ ಸಂಭ್ರಮಿಸಿದರು.

ಇದು ಏನು, ಇದಕ್ಕೆ ಏನಂತಾರೆ, ನೆಟ್ಟ ಸಸಿ ಚಿಗುರುವ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು. ಮಕ್ಕಳ ಪ್ರಶ್ನೆಗೆ ಉತ್ತರ ನೀಡಿದ ರೈತರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಅರಿವು ಮೂಡಿಸಿದರು. ಕೃಷಿಮಾಡಿ ದಣಿದ ಮಕ್ಕಳಿಗೆ ಊಟೋಪಚಾರ ಮಾಡಲಾಯಿತು. ಶಿಕ್ಷಕರು, ಗ್ರಾಮಸ್ಥರು ಮಕ್ಕಳೊಂದಿಗೆ ಸಹಭೋಜನ ಮಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಬಿ.ಕೆ.ಸುರೇಶ್, ಉಪಾಧ್ಯಕ್ಷೆ ನಾಗರತ್ನ, ಮುಖ್ಯ ಶಿಕ್ಷಕ ಜಿ.ಎ.ಗುರುಮೂರ್ತಿ, ಸಿಆರ್‌ಪಿ ನಾಗಭೂಷಣ, ಪತ್ರಿಕಾ ಪ್ರತಿನಿ ವಿಜಯೇಂದ್ರ ಪ್ರಭು, ಪ್ರಹ್ಲಾದ್, ಗಣೇಶ್ ಭಂಡಾರಿ, ಮಹಮ್ಮದ್ ರಫಿ, ಷಣ್ಮುಖಪ್ಪ ಗೌಡರು, ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.