ಜಿಲ್ಲೆ

ಪಿಎಂ ಸ್ವ-ನಿ ಯೋಜನೆ ಲಾಭ ಪಡೆಯಿರಿ


ಯಾದಗಿರಿ: ಕೋವಿಡ್ ನಂತರ ಬೀದಿಬದಿ ವ್ಯಾಪಾರಿಗಳು ತಮ್ಮ ಜೀವನ ಕಟ್ಟಿಕೊಳ್ಳಲು ಕೇಂದ್ರ ಸಕಾರ ಆತ್ಮನಿರ್ಭರ ಭಾರತ ಯೋಜನೆಯಡಿ ಜಾರಿಗೆ ತಂದಿರುವ ಪಿಎಂ ಸ್ವ-ನಿಯ ಸೌಲಭ್ಯವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ಕೌಶಲ ಅಭಿವೃದ್ಧಿ ಇಲಾಖೆ ನಗರ ಅಭಿಯಾನ ವ್ಯವಸ್ಥಾಪಕ ಡಾ.ಬಿ. ವಿಠೋಬ ಸಲಹೆ ನೀಡಿದರು.

ಸೋಮವಾರ ನಗರದ ಕೆನರಾ ಬ್ಯಾಂಕ್ನಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ಆಯೋಜಿಸಲಾಗಿದ್ದ ಸಾಲ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಾಪಾರ ವಿಸ್ತರಿಸಿಕೊಳ್ಳಲು ಬ್ಯಾಂಕ್ಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಕಿರುಸಾಲ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಆತ್ಮ ನಿರ್ಭರ ನಿ ಯೋಜನೆಯಡಿ 03 ಕಂತುಗಳಲ್ಲಿ ಸಾಲ ಒದಗಿಸಲಾಗುವುದು ಎಂದರು.

ಮೊದಲ ಕಂತಿನಲ್ಲಿ 10 ಸಾವಿರ ನೀಡಲಾಗುವುದು ಒಂದು ವರ್ಷದೊಳಗೆ ಮರುಪಾವತಿ ಮಾಡಿದ್ದಲ್ಲಿ ಎರಡನೇ ಕಂತಿನಲ್ಲಿ 20 ಹಾಗೂ ಮೂರನೇ ಕಂತಿನಲ್ಲಿ 50 ಸಾವಿರ ರೂ.ಕೊಡಲಾಗುತ್ತದೆ. ನಿಮ್ಮ ಆಥರ್ಿಕ ಸ್ವಾಲಂಬನೆ ದೃಷ್ಠಿಯಿಂದ ಸಕರ್ಾರ ಇಂಥ ಮಹತ್ವದ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.

ವ್ಯವಸ್ಥಾಪಕ ವಿಜಯಕುಮಾರ ಪಾಟೀಲ, ಬೀದಿ ವ್ಯಾಪಾರಿಗಳಿಗಾಗಿಯೇ ಇರುವಂಥ ಈ ಅವಕಾಶವನ್ನು ನಗರದ ಎಲ್ಲ ವ್ಯಾಪಾರಿಗಳು ಬಳಸಿಕೊಳ್ಳಬೇಕು. ಸಾಲಕ್ಕಾಗಿ ಅಜರ್ಿ ಸಲ್ಲಿಸಿದ್ದು, ಆಯ್ಕೆ ಹಾಗೂ ವಿತರಣೆಗಾಗಿ ಬಾಕಿ ಇರುವವರು ಕೂಡಲೇ ಬ್ಯಾಂಕ್ಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಕಿವಿಮಾತು ಹೇಳಿದರು.

ಮೇಳದಲ್ಲಿ 13 ಜನರಿಗೆ ಸಾಲ ವಿತರಣೆ ಮಾಡಲಾಯಿತು. ಬ್ಯಾಂಕ್ ಅಕಾರಿಗಳು ಹಾಗೂ ನಗರಸಭೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಇದ್ದರು.