ಕುಮಟಾ: ಇಲ್ಲಿನ ಹಿರಿಯ ಲೆಕ್ಕ ಪರಿಶೋಧಕ ಜಿ.ಎಸ್. ಕಾಮತ ಅವರು ಜನ್ಮದಿನದ ಅಂಗವಾಗಿ ಮಂಗಳವಾರ ಪ್ರಧಾನಮಂತ್ರಿ ಪರಿಹಾರ ನಿಧಿಗೆ 2.51 ಲಕ್ಷ ರೂ. ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ 2.51 ಲಕ್ಷ ರೂ. ದೇಣಿಗೆಯ ಚೆಕ್ ಅನ್ನು ಶಾಸಕ ದಿನಕರ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ಇದೇ ವೇಳೆ ತಾಲೂಕಾಸ್ಪತ್ರೆ ಕರೊನಾ ವಾರ್ಡ್ ಬಳಕೆಗಾಗಿ ಉತ್ತಮ ದರ್ಜೆಯ 100 ಪಿಪಿಇ ಕಿಟ್ಗಳನ್ನು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಗಣೇಶ ನಾಯ್ಕ ಅವರಿಗೆ ಹಸ್ತಾಂತರಿಸಿದರು.
ಚೆಕ್ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಪಿಪಿಇ ಕಿಟ್ ಕೊಡುಗೆ ಉತ್ತಮ ಕಾರ್ಯವಾಗಿದೆ. ಇದು ಇತರರಿಗೆ ಪ್ರೇರಣೆಯಾಗಲಿದೆ ಎಂದರು. ಯೋಗೇಶ ಕಾಮತ ಇದ್ದರು.