ಚಿತ್ರದುರ್ಗ:ಕೈಗಾರಿಕೆ ಮತ್ತು ವಾಣಿಜ್ಯಇಲಾಖೆಯಿಂದ ಜಿಲ್ಲೆಯ ಗ್ರಾಮ,ನಗರದ ವೃತ್ತಿಪರ ಕುಶಲಕರ್ಮಿಗಳಿಂದ ಪಿ.ಎಂ.ವಿಶ್ವ ಕರ್ಮ ಯೋಜನೆ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಬಡಗಿ,ದೋಣಿ ತಯಾರಿಸುವವರು,ಶಸ್ತ್ರ ತಯಾರಕರು,ಕಮ್ಮಾರರು,ಕಲ್ಲು ಕುಟಗ ವೃತ್ತಿಯವರು,ಬಟ್ಟೆ ಚಾಪೆ-ಕಸ ಪೊರಕೆ,ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಕರು,ಕ್ಷೌರಿಕರು,ಸುತ್ತಿಗೆ ಮತ್ತಿತರ ಉಪಕರಣ ತಯಾರಕರು,ದೋಬಿ,ಹೂಮಾಲೆ,ಆಭರಣ ತಯಾರಕರು,ದರ್ಜಿ,ಕುಂಬಾರರರು,ಮೀನು ಬಲೆ ಹೆಣೆಯುವವರು,ಶಿಲ್ಪಿ ಗಳು ಚಮ್ಮಾರರು,ಬೀಗ ತಯಾರಿಕ ಕುಶಲಕರ್ಮಿಗಳು ಅಗತ್ಯದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು https://pmvishwakarma.gov.in ವೆಬ್ ಸೈಟ್‌ನಲ್ಲಿ ಅಥವಾ ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಹೆಸರು ನೋಂದಾಯಿಸು ವಂತೆ ಇಲಾಖೆ ಜಂಟಿ ನಿರ್ದೇಶಕ ಬಿ.ಆನಂದ್ ಕೋರಿದ್ದಾರೆ.