ಕಲಬುರಗಿ: ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪಿಎಂ ಮಿತ್ರ ಜವಳಿ ಪಾರ್ಕ್ಗೆ ಸಂಬಂಧಿಸಿದಂತೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕರ್ನಾಟಕ ಸರ್ಕಾರದ ಹ್ಯಾಂಡ್‌ಲೂನ್ ಮತ್ತು ಟೆಕ್ಸ್ಟೈಲ್ ಇಲಾಖೆ ೮ ಹೂಡಿಕೆದಾರರೊಂದಿಗೆ ೧೭ ಸಾವಿರ ಕೋಟಿ ರೂ. ಮೊತ್ತದ ಒಡಂಬಡಿಕೆ ಮಾಡಿಕೊಂಡಿದೆ ಎಂದು ಕೇಂದ್ರ ಜವಳಿ ಖಾತೆ ರಾಜ್ಯ ಸಚಿವ ಪಬಿತ್ರಾ ಮಾರ್ಗೇರಿಟಾ ಹೇಳಿದರು. ಅಧಿವೇಶನದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಜೆವಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಪಿಎಂ ಮಿತ್ರ ಪಾರ್ಕ್ನಲ್ಲಿ ರಾಜ್ಯ ಸರ್ಕಾರ ಶೇ.೫೧ ಮತ್ತು ಕೇಂದ್ರ ಸರ್ಕಾರ ಶೇ.೪೯ ಪಾಲು ಹೊಂದಿರಲಿದೆ. ಬಿಜಿನೆಸ್ ಪ್ಲಾÈನ್, ಟೊಪೊಗ್ರಾಫಿಕಲ್ ಸೈಟ್ ಸರ್ವೇ ಕಾರ್ಯ ಪೂರ್ಣಗೊಂಡಿದೆ. ೪೪೪೫ ಕೋಟಿ ರೂ. ಹೂಡಿಕೆಯೊಂದಿಗೆ ೨೦೨೧-೨೨ರಿಂದ ೨೦೨೭-೨೮ರವರೆಗೆ ದೇಶದಲ್ಲಿ ಏಳು ಪಿಎಂ ಮಿತ್ರ ಪಾರ್ಕ್ ಸ್ಥಾಪನೆಯಾಗಲಿವೆ ಎಂದು ತಿಳಿಸಿದರು.