ಜಿಲ್ಲೆ

ಪಿಂಚಣಿದಾರರಿಗೆ 5.63 ಲಕ್ಷ ರೂ. ಪಾವತಿಸಲು ಆದೇಶ

ಧಾರವಾಡ: ನಿವೃತ್ತಿ ಪಿಂಚಣಿ ನಿಗದಿಯಲ್ಲಿ ಸೇವಾ ನ್ಯೂನತೆ ಎಸಗಿದ ಪ್ರಕರಣಕ್ಕೆ ಸಂಬAಽಸಿ ಹುಬ್ಬಳ್ಳಿಯ ಪ್ರಾವಿಡೆಂಟ್ ಫಂಡ್ ಇಲಾಖೆಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಽಸಿ ಆದೇಶಿಸಿದೆ.
ಪಿಂಚಣಿ ನಿಗದಿಯಲ್ಲಿ ಸೇವಾ ನ್ಯೂನತೆ ಕುರಿತು ೮ ಪಿಂಚಣಿದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ವಿಚಾರಣೆ ನಡೆಸಿದ್ದರು. ಪಿಎಫ್ ಇಲಾಖೆಯಿಂದ ಪ್ರತಿ ತಿಂಗಳು ನಡೆಸುವ ಪಿಂಚಣಿ ಲೋಕ ಅದಾಲತ್‌ನಲ್ಲಿ ಪಿಂಚಣಿ ವ್ಯಾಜ್ಯದ ಪರಿಹಾರ ಕಂಡುಕೊಳ್ಳದೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದು ತಪ್ಪು. ಇದನ್ನು ವಜಾಗೊಳಿಸಬೇಕು ಎಂದು ಪಿಎಫ್ ಇಲಾಖೆಯವರು ಆಕ್ಷೇಪಣೆ ಸಲ್ಲಿಸಿದ್ದರು. ಅದನ್ನು ತಳ್ಳಿ ಹಾಕಿದ ಆಯೋಗ, ಪಿಂಚಣಿ ನಿಗದಿಪಡಿಸುವಾಗ ಪಿಎಫ್ ಇಲಾಖೆ ಸರಿಯಾಗಿ ಲೆಕ್ಕ ಹಾಕದೆ ತಪ್ಪೆಸಗಿರುವುದು ಮೇಲ್ನೋಟಕ್ಕೆ ಕಂಡುಬAದಿದೆ ಎಂದು ಅಭಿಪ್ರಾಯಪಟ್ಟಿದೆ.
೮ ಜನ ದೂರುದಾರರಿಗೆ ಅವರ ಪಿಂಚಣಿ ನಿಗದಿಪಡಿಸಿದ ದಿನಾಂಕದಿAದ ಆಯೋಗ ಆದೇಶ ಹೊರಡಿಸಿದ ದಿನಾಂಕದವರೆಗೆ ೫.೬೩ ಲಕ್ಷ ರೂ. ಬಾಕಿ ಹಣ ಮತ್ತು ಅದಕ್ಕೆ ಶೇ. ೧೦ರಂತೆ ಬಡ್ಡಿ ಲೆಕ್ಕ ಹಾಕಿ ಪಾವತಿಸಬೇಕು ಎಂದು ಆದೇಶಿಸಿದೆ. ಜೊತೆಗೆ ೮ ದೂರುದಾರರಿಗೆ ಆದ ಮಾನಸಿಕ ತೊಂದರೆಗಾಗಿ ತಲಾ ೨೦ ಸಾವಿರ ರೂ. ಪರಿಹಾರ ಹಾಗೂ ತಲಾ ೧೦ ಸಾವಿರ ರೂ. ಪ್ರಕರಣದ ಖರ್ಚು ಪಾವತಿಸಬೇಕು ಎಂದು ಆಯೋಗ ಆದೇಶಿಸಿದೆ.