ಹಗರೆ: ದೀಹಳ್ಳಿ ಹೋಬಳಿಯ ಪೇಟೇಹಳ್ಳಿ ಗ್ರಾಮದ ಕೆ.ಟಿ ಜಲಜ, ಪಿ.ಸಿ ಶಿವಪ್ಪನವರ ಪುತ್ರಿಯಾದ ಪಿ.ಎಸ್.ಸ್ವಾತಿಯವರಿಗೆ ಎಸ್ ವ್ಯಾಸ ವಿಧ್ಯಾಲಯ ಗೌರವ ಡಾಕ್ಟರೇಟ್ ಪಧವಿ ನೀಡಿ ಗೌರವಿಸಿದೆ.
ಬೆಂಗಳೂರು ಅನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ನೆಡೆದ ಎಸ್ ವ್ಯಾಸ ವಿದ್ಯಾಲಯದ 20ನೇ ಪದವಿ ಪ್ರಧಾನ ಸಮಾರಂಭದಲ್ಲಿ ಪಿ.ಎಸ್. ಸ್ವಾತಿಯವರಿಗೆ ಗೌರವ ಡಾಕ್ಟರೇಟ್ ಪಧವಿ ನೀಡಿ ಗೌರವಿಸಿದರು.
ಇವರು ಸ್ಕೂಲ್ ಆಫ್ ಯೋಗ ಆಂಡ್ ನ್ಯಾಚುರೋಪತಿ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜೀವ ವಿಜ್ಞಾನ ವಿಭಾದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ.ಅಪ್ಪಾರ್ ಸವೋಜಿ ಮತ್ತು ಡಾ.ರಾಘವೇಂದ್ರ ಭಟ್ ರವರ ಮಾರ್ಗದರ್ಶನದಲ್ಲಿ ಹತ್ತು ವರ್ಷ ಸಂಶೋದನೆ ನೆಡೆಸಿ ತ್ರಾಟಕದಿಂದಾಗುವ ಮನೋವೈಜ್ಞಾನಿಕ ಬದಲಾವಣೆ ಎನ್ನುವ ವಿಷಯನ್ನು ಮಂಡಿಸಿದ್ದರು