ಜಿಲ್ಲೆ

ಪಾವಗಡದಲ್ಲಿ ಇಬ್ಬರು ಕಳ್ಳರ ಬಂಧನ

ಪಾವಗಡ:- ತಾಲೂಕಿನ ಹಲವು ದೇವಾಲಯ ಮತ್ತು ಮನೆಯೊಂದರಲ್ಲಿ ಕಳ್ಳತನ ನಡೆಸಿದ ಇಬ್ಬರು ಆರೋಪಿಗಳನ್ನು ಪಾವಗಡ ಗ್ರಾಮಾಂತರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದು, ಅವರಿಂದ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ಮೂಲದ ಬದಲಾಪುರ ಗ್ರಾಮದ ನರಸಿಂಹ (52)ಮತ್ತು ಪಾವಗಡ ತಾಲೂಕಿನ ಕ್ಯಾತಗಾನಕೆರೆ ಗ್ರಾಮದ ತಿಪ್ಪೇಸ್ವಾಮಿ (25)ಬಂಧಿತರು. ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಉಪ್ಪಾರಹಳ್ಳಿಯ ಕಾಳಿಕಾ ದೇವಸ್ಥಾನ, ಸೇವಾಲಾಲ್​ಪುರ ಗ್ರಾಮದ ಕರಿಯಮ್ಮನ ದೇವಸ್ಥಾನ ಫ್ರೆಂಡ್ಲೀಜಿವಿ ಆಂಜನೇಯ ಸ್ವಾಮಿ ದೇವಸ್ಥಾನ, ರಾಯಚರ್ಲು ಅಕ್ಕಮ್ಮ ದೇವಸ್ಥಾನ, ರಂಗಸಮುದ್ರ ಗ್ರಾಮದ ಗುರು ತಿಪ್ಪೇರುದ್ರಸ್ವಾಮಿ, ಕ್ಯಾತಗಾನಚರ್ಲು ಗ್ರಾಮದ ಒಂದು ಮನೆಯಲ್ಲಿ ಕಳವು ಮಾಡಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಬಂಧಿತರಿಂದ 2 ಕೆಜಿ 630 ಗ್ರಾಂ ಬೆಳ್ಳಿ ಹಾಗೂ 20 ಗ್ರಾಂ ಚಿನ್ನ ಸೇರಿದಂತೆ 4.50 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆ ತುಮಕೂರು ಜಿಲ್ಲಾ ಎಸ್​ಪಿ ಕೆ.ವಿ. ಅಶೋಕ್​, ಎಎಸ್ಪಿ ಮರಿಯಪ್ಪ, ಅಬ್ದುಲ್​ ಖಾದರ್​ ಮಾರ್ಗದರ್ಶನ ನೀಡಿದರು. ಡಿವೈಎಸ್ಪಿ ಮಂಜುನಾಥ್​, ಸಿಪಿಐ ಗಿರೀಶ್​, ಪಿಎಸ್​ಐ ಮಾಳಪ್ಪ ನಾಯ್ಕೋಡಿ, ಪೇದೆ ಲಕ್ಷ$್ಮಣ್​, ಸಿಬ್ಬಂದಿಗಳಾದ ಗೋವಿಂದರಾಜು, ಸೋಮು, ಧರ್ಮನಾಯ್ಕ್​, ಶ್ರೀಕಾಂತ್​ ನಾಯ್ಕ್​, ನಟೇಶ್​, ಕೇಶವ್​ ಇದ್ದರು. ನೇತೃತ್ವದಲ್ಲಿ ನಡೆಯಿತು.