ಜಿಲ್ಲೆ

ಪಾವಗಡ-ಮಡಕಶಿರಾ ರೈಲು ಮಾರ್ಗಕ್ಕೆ265 ಕೋಟಿ ರೂ.


ಚಿತ್ರದುರ್ಗ: ತುಮಕೂರು-ರಾಯದುರ್ಗ ರೈಲುಮಾರ್ಗ ಯೋಜನೆ ಭಾಗವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಾವಗಡದಿಂದ ಮಡಕಶಿರಾ ನಡುವಿನ 22 ಕಿ.ಮೀ. ಉದ್ದದ ಹೊಸ ಬ್ರಾಡ್‌ಗೇಜ್‌ಗೆ ಕೇಂದ್ರ ಸರ್ಕಾರ 265.92 ಕೋಟಿ ರೂ. ಅನುದಾನ ಒದಗಿಸುವ ಮೂಲಕ ತುಮಕೂರು-ರಾಯದುರ್ಗ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗಕ್ಕೆ ವೇಗ ನೀಡಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
ಇದಕ್ಕಾಗಿ ಈಗಾಗಲೇ ನೈಋತ್ಯ ರೈಲ್ವೆ ವಲಯದಿಂದ ಟೆಂಡರ್ ಕರೆಯಲಾಗಿದೆ. ಸೆಪ್ಟೆಂಬರ್ 11ರಂದು ಕಾಮಗಾರಿ ಬಿಡ್ ತೆರೆಯಲಾಗುತ್ತಿದ್ದು, 18 ತಿಂಗಳವೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ರೈಲ್ವೆ ಮುಂದಿದೆ. ಈ ಯೋಜನೆಯಡಿ ಪಾವಗಡ ಮತ್ತು ಮಡಕಶಿರಾ ನಗರಗಳಲ್ಲಿ 510 ಚ.ಮೀಟರ್ ವಿಸ್ತೀರ್ಣದ ಸುಸಜ್ಜಿತ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಲಿವೆ.
ಈ ಮಾರ್ಗದಲ್ಲಿ ತಡೆರಹಿತ ರೈಲು ಸಂಚಾರಕ್ಕೆ 3 ಪ್ರಮುಖ ಸೇತುವೆಗಳು, 32 ಸಣ್ಣ ಸೇತುವೆಗಳು, 21 ಆರ್‌ಯುಬಿ ಹಾಗೂ 4ಆರ್ ಒ ಬಿಗಳು ನಿರ್ಮಾಣವಾಗಲಿದ್ದು, ಅಡೆತಡೆಯಿಲ್ಲದೆ ಗಂಟೆಗೆ 110 ಕಿ.ಮೀ. ವೇಗದಲ್ಲಿ ರೈಲು ಸಂಚಾರಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಮಗ್‌ಶಾಟ್)))) ಗೋವಿಂದ ಎಂ.ಕಾರಜೋಳ