ಜಿಲ್ಲೆ

ಪಾಳ್ಯ ಗ್ರಾ.ಪಂ.ಗೆ ಸವಿತಾ ಅಧ್ಯಕ್ಷೆ

ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎಸ್.ಸವಿತಾ ಆಯ್ಕೆಯಾಗಿದ್ದಾರೆ. ಮಂಜುಳಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಚುನಾವಣೆ ನಿಗದಿಪಡಿಸಲಾಗಿತ್ತು. ಅಧ್ಯಕ್ಷರ ಸ್ಥಾನಕ್ಕೆ ಸವಿತಾ ಹಾಗೂ ಹೇಮಾವತಿ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸವಿತಾ ಅವರಿಗೆ 9 ಮತಗಳು ಪಡೆದು ವಿಜೇತರಾದರೆ, ಹೇಮಾವತಿ 7 ಮತಗಳನ್ನು ಪಡೆದು 2 ಮತಗಳಿಂದ ಪರಾಜಿತರಾದರು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ್ ಸವಿತಾ ಅವರ ಆಯ್ಕೆಯನ್ನು ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಸವಿತಾ ಅವರನ್ನು ಪಾಳ್ಯ ಗ್ರಾ.ಪಂ. ಸದಸ್ಯರು, ಗ್ರಾಮದ ಯಜಮಾನರು ಹಾಗೂ ಮುಖಂಡರು ಅಭಿನಂದಿಸಿದರು.

ಗ್ರಾ.ಪಂ ಉಪಾಧ್ಯಕ್ಷೆ ಚೈತ್ರಾ, ನಿಕಟ ಪೂರ್ವ ಅಧ್ಯಕ್ಷೆ ಮಂಜುಳಾ, ಸದಸ್ಯರಾದ ಕಮಲಪುರ ರಾಜು, ಜಗದೀಶ್ ನಾಯಕ, ಬಿ.ರವಿ, ಶಿವ ಮೂರ್ತಿ, ಗೌರಯ್ಯ, ಮಹದೇವ ಪ್ರಸಾದ್, ಶಿವಕು ಮಾರ್ ಸ್ವಾಮಿ, ಮಹದೇವಮ್ಮ, ಲಕ್ಷ್ಮೀ, ಸುಮಾ, ಶಿವಮ್ಮ, ಜೆ.ಸೀಗಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜುನೈದ್ ಅಹಮ್ಮದ್, ಕಾರ್ಯದರ್ಶಿ ಸಿದ್ದಯ್ಯ ಇತರರಿದ್ದರು.