ಬೆಳಗಾವಿ: ನಗರದ ರಿಸಾಲ್ದಾರ್ ಗಲ್ಲಿಯ ಹಳೆಯ ಕಾರ್ಪೋರೇಷನ್ ಕಚೇರಿ ಕಟ್ಟದದಲ್ಲಿ ಗುರುವಾರ ಮತ್ತೆ ಬೆಂಕಿ ತಗಲಿ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಕಿಡಿಗೇಡಿಗಳು ಧೂಪಮಾನ ಮಾಡಿ ಸಿಗರೇಟ್ ಬಿಸಾಕಿ ಹೋಗಿದ್ದರಿಂದ ಬೆಂಕಿ ತಗುಲಿದೆ.
ಮಹಾನಗರದಲ್ಲಿ ಅತ್ಯಂತ ಹಳೆಯ ಕಟ್ಟಡಗಳಲ್ಲಿ ಒಂದಾಗಿರುವ ಪಾಲಿಕೆಯ ಆಡಳಿತ ಕಚೇರಿಯ ಹಳೆಯ ಕಟ್ಟಡದಲ್ಲಿ ಬೆಳಗಾವಿ ತಹಸೀಲ್ದಾರ್ ಕಚೇರಿ, ಬೆಳಗಾವಿ ಒನ್ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕಟ್ಟಡದಲ್ಲಿ 50 ವರ್ಷದ ಹಿಂದಿನ ಪಾಲಿಕೆ ಹಳೆಯ ದಾಖಲೆಗಳು, ಕಟ್ಟಡಗಳ ನಕ್ಷೆ ಸಂಪೂರ್ಣ ಸುಟ್ಟು ಹಾಳಾಗಿವೆ. ಪ್ರತಿವರ್ಷ ಕಟ್ಟಡದಲ್ಲಿರುವ ದಾಖಲೆಗಳ ಸಂಗ್ರಹ ಕೊಠಡಿ ಬೆಂಕಿ ತಗುಲುತ್ತಿದ್ದರು ಮುನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಕಾರ್ಪೋರೇಷನ್ ಹಳೆಯ ಬಿಲ್ಡಿಂಗ್‌ನಲ್ಲಿ ಕಿಡಿಗೇಡಿಗಳು ಧೂಪಮಾನ ಮಾಡಿ ಅಲ್ಲಿಯೇ ಸಿಗರೇಟ್ ಬಿಸಾಕಿ ಹೋಗಿದ್ದರಿಂದ ಬೆಂಕಿ ತಗುಲಿದೆ. ತಹಸೀಲ್ದಾರ್ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಭದ್ರತಾ ಸಿಬ್ಬಂದಿ ನಿಯೋಜನೆ ಮಾಡದಿರುವ ಕಾರಣ ಅನಾಹುತ ಸಂಭವಿಸಿದೆ. ಯಾವುದೇ ದಾಖಲೆಗಳಿಗೆ ಬೆಂಕಿ ಹತ್ತಿಲ್ಲ. ಕಟ್ಟಡ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದೇನೆ. | ಶುಭ.ಬಿ ಪಾಲಿಕೆ ಆಯುಕ್ತ