ಹುಬ್ಬಳ್ಳಿ: ಹá--ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಫೆ. 17ರಂದು ಬೆಳಗ್ಗೆ 11ಗಂಟೆಗೆ ಇಲ್ಲಿಯ ಪಾಲಿಕೆ ಸಭಾಭವನದಲ್ಲಿ ನಡೆಯಲಿದೆ. ಅವಳಿ ನಗರದಲ್ಲಿ ಮೊದಲ ಬಾರಿಗೆ ಜಿಐಎಸ್ ಸರ್ವೆ ಕೈಗೊಳ್ಳುವ ಟೆಂಡರ್ಗೆ ಅನುಮೋದನೆ, ಭೂ ಬಾಡಿಗೆಯಿಂದ ನೀಡಲಾದ ಆಸ್ತಿಗಳು ಮತ್ತು ಪಾಲಿಕೆ ಒಡೆತನದ ಖುಲ್ಲಾ ಜಾಗಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡುವ, ಇನ್ನಿತರ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬರಲಿದೆ.